ರಾಜಭವನದ ವೈಭವವನ್ನು ಕಣ್ತುಂಬಿಕೊಂಡ ಸಾರ್ವಜನಿಕರು

ಈ ಸುದ್ದಿಯನ್ನು ಶೇರ್ ಮಾಡಿ

Rajabhavana
ಬೆಂಗಳೂರು, ಸೆ.9- ರಾಜಭವನದಲ್ಲಿ ಸಾರ್ವ ಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಿರುವುದಕ್ಕೆ ಸಾರ್ವ ಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತ್ತಿದೆ.
ರಾಜಭವನಕ್ಕೆ ಮುಕ್ತ ಪ್ರವೇಶವನ್ನು ಸೆ.6ರವರೆಗೆ ಕಲ್ಪಿಸಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭೇಟಿ ನೀಡಿ ಖುಷಿಯಿಂದ ರಾಜಭವನವನ್ನು ವೀಕ್ಷಿಸಿದರು. ರಾಜಭವನದ ವೈಭವವನ್ನು ಕಣ್ತುಂಬಿ ಕೊಂಡು ಮುಕ್ತ ಕಂಠದಿಂದ ಶ್ಲಾಘಿಸಿದರು. ಸುಮಾರು 25 ಸಾವಿರಕ್ಕೂ ಹೆಚ್ಚು ಮಂದಿ ರಾಜಭವನವನ್ನು ವೀಕ್ಷಿಸಿದರು. ಮಕ್ಕಳು ಕೂಡ ತಮ್ಮ ಪೊಷಕರೊಂದಿಗೆ ಭೇಟಿ ನೀಡಿ ರಾಜಭವನದ ಸೌಂದರ್ಯವನ್ನು ಆನಂದಿಸಿದರು.

ರಾಜಭವನದಲ್ಲಿನ ವರ್ಣರಂಜಿತ ದೀಪಾಲಂಕಾರ ವನ್ನು ನೋಡಿ ಕಣ್ತುಂಬಿಕೊಂಡರು. ಮೈಸೂರು ಪೊಲಿಸ್ ಬ್ಯಾಂಡ್ ಅವರ ಸುಮದುರ ವಾದ್ಯಗೋಷ್ಠಿ ಯನ್ನು ತನ್ಮಯತೆಯಿಂದ ಆಲಿಸಿದರು. ರಾಜಭವನದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜಭವನದ ಇತಿಹಾಸದ ಕುರಿತು ಸಾಕ್ಷ್ಯಚಿತ್ರವನ್ನು ವೀಕ್ಷಿಸಿದ ಸಾರ್ವಜನಿಕರು ರಾಜಭವನದ ಇತಿಹಾಸ ಹಾಗೂ ಸಂಪೂರ್ಣ ಮಾಹಿತಿ ಪಡೆದರು. ರಾಜಭವನ ವೀಕ್ಷಿಸಲು ಬಂದವರಿಗೆ ಫೋಟೋ ತೆಗೆಸಿಕೊಳ್ಳಲು ಛಾಯಾಗ್ರಾಹಕ ವ್ಯವಸ್ಥೆಯನ್ನು ಮಾಡಲಾಗಿತ್ತು.

ಬಿ.ಇ.ಟಿ ಪದವಿ ಕಾಲೇಜು ಹಾಗೂ ಆದರ್ಶ ಕಿವುಡ ಹಾಗೂ ಮೂಕ ಶಾಲೆಯ ವಿದ್ಯಾರ್ಥಿಗಳಿಗೆ ರಾಜಭವನವನ್ನು ನೋಡಲು ಅವಕಾಶವನ್ನು ಕಲ್ಪಿಸಲಾಯಿತು. ಬಿಬಿಎಂಪಿ, ಪೊಲಿಸ್ ಇಲಾಖೆ, ಪ್ರವಾಸೋದ್ಯಮ, ತೋಟಗಾರಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಿವಿಧ ಏಜೆನ್ಸಿಗಳ ಸಹಕಾರದಿಂದ ಕಾರ್ಯಕ್ರಮವು ಯಶಸ್ಸಿಗೆ ಕಾರಣವಾಯಿತು.

Facebook Comments

Sri Raghav

Admin