“ನಾನು ಯಾವುದೇ ತಪ್ಪು ಮಾಡಿಲ್ಲ, ಕ್ರಿಮಿನಲ್ ಕೂಡ ಅಲ್ಲ”

ಈ ಸುದ್ದಿಯನ್ನು ಶೇರ್ ಮಾಡಿ

D-K-Shivakumar--01

ಬೆಂಗಳೂರು, ಸೆ.9- ನಾನು ಯಾವುದೇ ತಪ್ಪು ಮಾಡಿಲ್ಲ. ಕ್ರಿಮಿನಲ್ ಕೂಡ ಅಲ್ಲ, ಇಡಿ ಪ್ರಕರಣದ ಹಿಂದೆ ಕೆಲ ನಾಯಕರ ಕೈವಾಡವಿದೆ. ಯಾವುದೇ ತನಿಖೆ ಎದುರಿಸಲು ನಾನು ಸಿದ್ಧನಿದ್ದೇನೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಇಂದು ಅರೆಸ್ಟ್ ಆಗ್ತಾರೆ, ನಾಳೆ ಅರೆಸ್ಟ್ ಆಗ್ತಾರೆ ಎಂದು ವ್ಯಾಪಕ ಅಪಪ್ರಚಾರ ಮಾಡಲಾಗುತ್ತಿದೆ. ನಾನು ಯಾವುದೇ ಕಾನೂನನ್ನು ಉಲ್ಲಂಘಿಸಿಲ್ಲ. ಇದುವರೆಗೆ ನನಗೆ ಯಾವುದೇ ನೋಟಿಸ್ ಬಂದಿಲ್ಲ. ದೆಹಲಿಯಲ್ಲಿ ಎರಡು ಮನೆಗಳಿವೆ. ಯಾವುದೇ ಅಕ್ರಮ ಆಸ್ತಿ ನನ್ನ ಬಳಿ ಇಲ್ಲ ಎಂದು ಅವರು ಹೇಳಿದರು.

ಐಟಿ ಅಧಿಕಾರಿಗಳು ವಿಚಾರಣೆಗೆ ಕರೆದಿದ್ದರು. ನಾನು ಹೋಗಿದ್ದೆ. ರಾಜಕೀಯದಲ್ಲಿ ಯಾರು ಪ್ರಬಲರಾಗಿರುತ್ತಾರೋ ಅಂತಹವರು ಟಾರ್ಗೆಟ್ ಆಗ್ತಾರೆ. ನಾನು ಕಿವಿಯಲ್ಲಿ ಹೂವಿಟ್ಟುಕೊಂಡು ಬೆಂಗಳೂರಿಗೆ ಬಂದಿಲ್ಲ, ರಾಜಕಾರಣ ಮಾಡುವುದಕ್ಕಾಗಿಯೇ ಬಂದಿದ್ದೇನೆ. ರಾಜಕೀಯದಲ್ಲಿ ಗೇಮ್ ಆಡಲು ನನಗೂ ಬರುತ್ತದೆ. ಯಡಿಯೂರಪ್ಪ ಅವರ ಕೇಸ್‍ಗಳು ಕೋರ್ಟ್‍ಗಳಲ್ಲಿವೆ ಎಂದು ಹೇಳಿದರು.

ಇಡಿ ಪ್ರಕರಣದ ಬಗ್ಗೆ ವಕೀಲರ ಜತೆ ಚರ್ಚೆ ನಡೆಸುತ್ತೇನೆ. ಹೈಕಮಾಂಡ್‍ಗೆ ತಿಳಿಸಿಲ್ಲ. ಮುಖ್ಯಮಂತ್ರಿ ಜತೆ ಚರ್ಚೆ ಮಾಡಬೇಕಿದೆ ಎಂದು ಹೇಳಿದರು. ನಿಯೋಗದಲ್ಲಿ ದೆಹಲಿಗೆ: ಕೊಡಗು ಅತಿವೃಷ್ಟಿಗೆ ಪರಿಹಾರ ಕೋರಲು ಪ್ರಧಾನಿಗಳನ್ನು ಭೇಟಿ ಮಾಡಲು ಸಿಎಂ ನೇತೃತ್ವದ ನಿಯೋಗ ದೆಹಲಿಗೆ ತೆರಳುತ್ತಿದ್ದು, ನಿಯೋಗದಲ್ಲಿ ನಾನೂ ತೆರಳುತ್ತಿದ್ದೇನೆ ಎಂದು ಡಿಕೆಶಿ ಹೇಳಿದರು.

Facebook Comments

Sri Raghav

Admin