ಗಂಗಾಧರ ಚಡಚಣ ಹತ್ಯೆ ಪ್ರಕರಣದಲ್ಲಿ ಡಿವೈಎಸ್‍ಪಿ, ಸಿಪಿಐ ಸಸ್ಪೆಂಡ್

ಈ ಸುದ್ದಿಯನ್ನು ಶೇರ್ ಮಾಡಿ

Chadachana-Murder-case-DYSP
ವಿಜಯಪುರ, ಸೆ.9- ಭೀಮಾತೀರದ ಗಂಗಾಧರ ಚಡಚಣ ನಿಗೂಢ ಹತ್ಯೆ ಹಾಗೂ ಧರ್ಮರಾಜ್ ಎನ್‍ಕೌಂಟರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂಡಿ ಡಿವೈಎಸ್‍ಪಿ ರವೀಂದ್ರ ಶಿರೂರ ಹಾಗೂ ಸಿಪಿಐ ಎಂ.ಬಿ ಅಸೋದೆ ಅವರನ್ನು ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಸೇವೆ ಯಿಂದ ಅಮಾನತು ಮಾಡಿ ಗೃಹ ಇಲಾಖೆ ಆದೇಶ ಹೊರಡಿಸಿದೆ. ಗಂಗಾಧರ ಚಡಚಣ ನಿಗೂಢ ಹತ್ಯೆ ಹಾಗೂ ಧರ್ಮರಾಜ ಚಡಚಣ ಎನ್ ಕೌಂಟರ್ ಪ್ರಕರಣದ ವಿಚಾರಣೆಯಲ್ಲಿ ರವೀಂದ್ರ ಶಿರೂರ ಅವರು ಕರ್ತವ್ಯಲೋಪ ವೆಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಡಿವೈಎಸ್‍ಪಿ ಅವರನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರದ ಗೃಹ ಇಲಾಖೆ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಪ್ರಸ್ತುತ ಕಲಬುರಗಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ಮಲ್ಲಿಕಾರ್ಜುನ್ ಬಿ.ಅಸೋದೆ ಅವರು ಗಂಗಾಧರ ಅವರ ಹತ್ಯೆ ಸಮಯದಲ್ಲಿ ಚಡಚಣದಲ್ಲಿ ಸಿಪಿಐ ಆಗಿದ್ದರು. ಸಿಐಡಿ ವಿಚಾರಣೆ ನೋಟಿಸ್ ನೀಡಿದ್ದರೂ ಸ್ಪಂದಿಸದೆ ನಾಪತ್ತೆಯಾಗಿದ್ದರು. ಅಸೋದೆ ಅಮಾನತು ಮಾಡಿ ಡಿಜಿ ಆದೇಶ ಹೊರಡಿಸಿದ್ದು ಅವರ ಬಂಧನಕ್ಕೆ ಸಿಐಡಿ ಬಲೆ ಬೀಸಿದೆ. ನಿನ್ನೆ ಸಿಐಡಿಯಿಂದ ಇಂಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಬಳಿಕ ವಿಜಯಪುರ ಜೈಲಿನಲ್ಲಿದ್ದ ಕೈದಿಗಳನ್ನು ರಾತ್ರೋರಾತ್ರಿ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಆರೋಪಿ ಮಹಾದೇವ ಸಾಹುಕಾರ ಭೈರಗೊಂಡ ಅವರನ್ನು ಬಳ್ಳಾರಿ ಜೈಲಿಗೆ, ಅಂದಿನ ಪಿಎಸ್‍ಐ ಆಗಿದ್ದ ಗೋಪಾಲ ಅವರನ್ನು ಬೆಳಗಾವಿ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲಾಗಿದೆ.

Facebook Comments

Sri Raghav

Admin