ಬಾವಿಯೊಂದರಲ್ಲಿ ಕ್ರೈಸ್ತ ಸನ್ಯಾಸಿಯೊಬ್ಬರ ಶವ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

kerala-Susaide

ತಿರುವನಂತಪುರ, ಸೆ. 9 (ಪಿಟಿಐ) – ಬಾವಿಯೊಂದರಲ್ಲಿ ಕ್ರೈಸ್ತ ಸನ್ಯಾಸಿಯೊಬ್ಬರ ಶವ ಪತ್ತೆಯಾಗಿದ್ದು ಹಲವು ಅನುಮಾನಗಳು ಮೂಡಿಸಿವೆ. ಕೋಲ್ಲಾಮ್‍ನ ಸೇಂಟ್ ಸ್ಟೇಫಿನ್ಸ್ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಸುಸಾನ್ ಮ್ಯಾಥ್ಯೂ (54) ನಿಗೂಢವಾಗಿ ಮೃತಪಟ್ಟಿದ್ದಾರೆ.  ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು.  ಈ ವೇಳೆ ಸ್ಥಳೀಯರೊಬ್ಬರು ಸುಸಾನ್ ಮ್ಯಾಥ್ಯೂನ್ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು, ಇಂದು ಬೆಳಗ್ಗೆ ಕೂಡ ನನಗೆ ಆರೋಗ್ಯ ಸರಿಯಿಲ್ಲ ನಾನು ಆಸ್ಪತ್ರೆಗೆ ಹೋಗುವುದರಿಂದ ಚರ್ಚ್‍ಗೆ ಬರುವುದಿಲ್ಲ ಎಂದು ಹೇಳಿದ್ದರು ಎಂದು ತಿಳಿಸಿದರು. ಸುಸಾನ್ ಅವರು ಮಲಾನ್‍ಕರಾ ಸೈರಿಯಾನ್ ಓರ್ಥೊಡೋಕ್ ಚರ್ಚ್‍ನವರೇ ನಡೆಸುತ್ತಿರುವ ಕಾನ್ವೆಂಟ್‍ನಲ್ಲಿ ಕಳೆದ 12 ವರ್ಷಗಳಿಂದ ಶಿಕ್ಷಕಿ ವೃತ್ತಿ ಮಾಡುತ್ತಿದ್ದು ಅವರ ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Facebook Comments

Sri Raghav

Admin