ಅಮೆರಿಕನ್ ಓಪನ್ ಗೆದ್ದು ನವೋಮಿ ಒಸಾಕಾ ದಾಖಲೆ, ಸೋತ ಸೆರೆನಾ ರೆಫರಿ ಜೊತೆ ಕಿರಿಕ್..!

ಈ ಸುದ್ದಿಯನ್ನು ಶೇರ್ ಮಾಡಿ

Serena
ನ್ಯೂಯಾರ್ಕ್, ಸೆ.9 (ಪಿಟಿಐ)-ಅಮೆರಿಕನ್ ಓಪನ್-2018 ಟೆನಿಸ್ ಪಂದ್ಯಾವಳಿಯಲ್ಲಿ ಜಪಾನ್ ಹೆಮ್ಮೆಯ ಆಟಗಾರ್ತಿ ನವೋಮಿ ಒಸಾಕಾ ಹೊಸ ದಾಖಲೆ ಬರೆದಿದ್ದಾರೆ. ಅಂತಿಮ ಪಂದ್ಯದಲ್ಲಿ ಅಮೆರಿಕದ ಬಲಿಷ್ಠ ಎದುರಾಳಿ ಸೆರೆನಾ ವಿಲಿಯಮ್ಸ್‍ರನ್ನು ನವೋಮಿ ಮಣಿಸಿದರು. ಇದರೊಂದಿಗೆ ಅತಿದೊಡ್ಡ ಸಿಂಗಲ್ಸ್ ಗ್ರ್ಯಾನ್ ಸ್ಮಾಮ್‍ನಲ್ಲಿ ಪ್ರಶಸ್ತಿ ಗೆದ್ದ ಉದಯರವಿ ನಾಡಿನ ಪ್ರಥಮ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

20 ವರ್ಷದ ಒಸಾಕಾ ನವೋಮಿ 6-2,6-4 ಸೆಟ್‍ಗಳಿಂದ ಅಮೆರಿಕದ ಬ್ಲಾಕ್ ಪ್ಯಾಂಥರ್ ಎಂದೇ ಹೆಸರಾದ ಗಟ್ಟಿಗಿತ್ತಿ ಸೆರನಾರನ್ನು ಸೋಲಿಸಿ ಸಿಂಗಲ್ಸ್ ಗ್ರ್ಯಾನ್ ಸ್ಲ್ಯಾಮ್ ಕಿರೀಟ ತೊಟ್ಟು ವಿಜೃಂಭಿಸಿದರು. ಇದರಿಂದ ಹಾಲಿ ಚಾಂಪಿಯನ್ ಸೆರೆನಾಗೆ ತವರಿನಲ್ಲೇ ತೀವ್ರ ಮುಖಭಂಗವಾಗಿದೆ. ಜಪಾನಿನ ಆಟಗಾರ್ತಿಯೊಬ್ಬರು ಗ್ರ್ಯಾನ್ ಸ್ಲ್ಯಾಮ್ ಫೈನಲ್‍ಗೆ ಲಗ್ಗೆ ಹಾಕಿದ್ದು ಇದೇ ಮೊದಲು. ಅಲ್ಲದೇ ಅತ್ಯಂತ ಅನುಭವಿ ಸೆರೆನಾ ವಿಲಿಯಮ್ಸ್‍ರನ್ನು ಮಣಿಸಿ ಚಾಂಪಿಯನ್ ಆಗಿದ್ದು ಟೆನಿಸ್ ಲೋಕದ ಇತಿಹಾಸದಲ್ಲಿ ಅಚ್ಚರಿಯ ಫಲಿತಾಂಶವಾಗಿದೆ.

ಯುಎಸ್ ಓಪನ್ ಮಹಿಳೆಯರ ಅಂತಿಮ ಹಣಾಹಣಿ ರೋಚಕ ಹಂತ ತಲುಪಿತ್ತು. ಅತಿಥೇಯ ನಾಡಿನ ದೈತ್ಯ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಮತ್ತು ಜಪಾನ್‍ನ ಯುವ ತಾರೆ ನವೋಮಿ ಪರಸ್ಪರ ಎದುರಾಳಿಯಾಗಿದ್ದರು. ಸೆರೆನಾ ಮತ್ತೆ ಈ ಪ್ರಶಸ್ತಿ ಗೆಲ್ಲುವ ನೆಚ್ಚನ ಅಟಗಾರ್ತಿಯಾಗಿದ್ದರು. ಆದರೆ ಸಮಯೋಚಿತ ಮತ್ತು ಶಿಸ್ತುಬದ್ಧ ಆಟ ಪ್ರದರ್ಶಿಸಿದ ಜಪಾನಿ ತಾರೆ ಅತ್ಯಂತ ಪ್ರಬಲ ಸೆರೆನಾಗೆ ಸೋಲುಣಿಸಿದರು.  ಸೆಮಿಫೈನಲ್ ಹಣಾಹಣಿಯಲ್ಲಿ ಸೆರೆನಾ ಲಾಟ್ವಿಯಾದ ಅನಾಸ್ತಾಸಿಜ ಸೆವಸ್ತೀವಾ ಅವರನ್ನು 6-3, 6-0 ಅಂತರದಿಂದ ಸುಲಭವಾಗಿ ಮಣಿಸಿ ಪೈನಲ್ ತಲುಪಿದ್ದರು. ನವೋಮಿ, ಅಮೆರಿಕದ ಮತ್ತೊಬ್ಬ ಪ್ರಬಲ ಆಟಗಾರ್ತಿ ಮ್ಯಾಡಿಸನ್ ಕೀಸ್ ಅವರನ್ನು 6-2,6-4 ನೇರ ಸೆಟ್‍ಗಳಿಂದ ಸೋಲಿಸಿ ಅಂತಿಮ ಹಂತ ತಲುಪಿದ್ದರು.

ಜಪಾನಿನ ಆಟಗಾರ್ತಿಯೊಬ್ಬರು ಗ್ರ್ಯಾನ್ ಸ್ಲ್ಯಾಮ್ ಫೈನಲ್‍ಗೆ ಲಗ್ಗೆ ಹಾಕಿದ್ದು ಇದೇ ಮೊದಲು. ಅಲ್ಲದೇ ಅತ್ಯಂತ ಅನುಭವಿ ಸೆರೆನಾ ವಿಲಿಯಮ್ಸ್‍ರನ್ನು ಮಣಿಸಿ ಚಾಂಪಿಯನ್ ಆಗಿದ್ದು ಟೆನಿಸ್ ಲೋಕದ ಇತಿಹಾಸದಲ್ಲಿ ಅಚ್ಚರಿಯ ಫಲಿತಾಂಶವಾಗಿದೆ.
ಸೆರೆನಾ-ರೆಫರಿ ಮಾತಿನ ಚಕಮಕಿ :

ಫೈನಲ್ ಪಂದ್ಯದ ವೇಳೆ ಹೈಡ್ರಾಮಾವೊಂದು ನಡೆಯಿತು. ಸೆರೆನಾ ಮತ್ತು ರೆಫರಿ ಕಾರ್ಲೋಸ್ ರಾಮೋಸ್ ನಡುವೆ ಒಂದು ಹಂತದಲ್ಲಿ ತೀವ್ರ ಮಾತಿನ ಚಕಮಕಿ ಸಹ ನಡೆಯಿತು.  ಎರಡನೇ ಸೆಟ್ ವೇಳೆ ರೆಫರಿ ತೀರ್ಮಾನವನ್ನು ಅಮೆರಿಕದ ಅಗ್ರಮಾನ್ಯ ಆಟಗಾರ್ತಿ ವಿರೋಧಿಸಿದರು. ಇದು ಆಟಗಾರ್ತಿಯ ಶಿಸ್ತು ಉಲ್ಲಂಘನೆ ಎಂದು ರೆಫರಿ ಪೆನಾಲ್ಟಿ ಅಂಕ ನೀಡಿದರು. ಇದರಿಂದ ಸಿಡಿಮಿಡಿಗೊಂಡ ಅವರು ಮಾತಿನ ಚಕಮಕಿಗೆ ಇಳಿದರು.  ಪಂದ್ಯದಲ್ಲಿ ಸೋತ ನಂತರ ಮಾತನಾಡಿದ ಸೆರೆನಾ, ರೆಫರಿ ಕಾರ್ಲೋಸ್ ಸುಳ್ಳುಗಾರ, ಕಳ್ಳ. ನನ್ನ ಗೆಲುವು ಕಸಿದಿದ್ದಾರೆ ಎಂದು ಆರೋಪಿಸಿದರು.

Facebook Comments

Sri Raghav

Admin