ನಿಮ್ಮ ಬಳಿ ಹರಿದ ಅಥವಾ ಹಾಳಾದ ನೋಟುಗಳಿವೆಯೇ..? ಹಾಗಾದರೆ ಇಲ್ಲಿದೆ ಒಂದು ಶಾಕಿಂಗ್ ಸುದ್ದಿ..!

ಈ ಸುದ್ದಿಯನ್ನು ಶೇರ್ ಮಾಡಿ

Notes--001

ನವದೆಹಲಿ. ಸೆ. 09 : ನಿಮ್ಮಲ್ಲಿ ಹರಿದು ಹೋದ ಅಥವಾ ಹಾಳಾದ  2000 ರೂ. ಅಥವಾ 200 ರೂ. ನೋಟುಗಳು ಇವೆಯೇ? ಅವುಗಳನ್ನು ಬ್ಯಾಂಕುಗಳಲ್ಲಿ ) ಬದಲಾಯಿಸಲು ನಿರ್ಧರಿಸಿದ್ದೀರಾ? ಹಾಗಿದ್ದರೆ ಈ ಶಾಕಿಂಗ್ ಸುದ್ದಿಯನ್ನೊಮ್ಮೆ ಓದಿ. ಇನ್ನು ಮೇಲೆ ನಿಮ್ಮ ಬಳಿಯಿರುವ ನೋಟುಗಳ ಬಗ್ಗೆ ಅತೀ ಎಚ್ಚರದಿಂದ ಇರುವುದು ಒಳಿತು. ನಿಮ್ಮಲ್ಲಿ ಹರಿದು ಹೋದ ನೋಟುಗಳಿದ್ದರೆ ಅದಕ್ಕೆ ಬ್ಯಾಂಕ್ ಗಳು ನೋಟು ಬದಲಾಯಿಸಿ ಕೊಡುತ್ತಾರೆ ಬಿಡು ಎನ್ನುಕೊಳ್ಳುವವರಿಗೆ ಶಾಕ್ ಕಾದಿದೆ.

ನೋಟು ನಿಯಮಾವಳಿಗಳಿಗೆ ತಿದ್ದುಪಡಿ ತರಲಾಗಿದ್ದು, ನೀವು ಬದಲಾಯಿಸಲು ಇಚ್ಛಿಸುವ ನೋಟಿನ ಸ್ಥಿತಿಗತಿಯ ಮೇಲೆ ನಿಮಗೆಷ್ಟು ಮೌಲ್ಯದ ಹಣ ನೀಡಬೇಕೆಂದು ನಿರ್ಧರಿಸಲಾಗುತ್ತದೆ. ಅಂದರೆ, ಹರಿದ ನೋಟಿನ ಸ್ಥಿತಿ ಪರವಾಗಿಲ್ಲ ಎನ್ನುವಂತಿದ್ದರೆ ನಿಮಗೆ ಅದರ ಅರ್ಧ ಮೌಲ್ಯದಷ್ಟು ಹಣ ಸಿಗುತ್ತದೆ. ಆದರೆ, ನೋಟಿನ ಸ್ಥಿತಿ ತೀರಾ ಕೆಟ್ಟದಾಗಿದ್ದರೆ ನಿಮಗೆ ಯಾವ ಹೊಸ ನೋಟೂ ಸಿಗುವುದಿಲ್ಲ.

ಇಂಥದ್ದೊಂದು ಹೊಸ ನಿಯಮಗಳನ್ನು ಜಾರಿಗೆ ತರಲೆಂದೇ 2009ರ ಆರ್‌ಬಿಐನ ನೋಟು ಬದಲಾವಣೆಯ ನಿಯಮಗಳಲ್ಲಿ ತಿದ್ದುಪಡಿ ತರಲಾಗಿದೆ. ಹಾಗಾಗಿ, 2000 ರೂ. ಹಾಗೂ 200 ರೂ. ಮುಖಬೆಲೆಯ ಹೊಸ ನೋಟುಗಳು ಹಾಗೂ ಆನಂತರ ಜಾರಿಗೊಂಡ 10, 20, 50 ಹಾಗೂ 100 ರೂ. ಮುಖ ಬೆಲೆಯ ಮಹಾತ್ಮಾಗಾಂಧಿ ಸರಣಿಯ ನೋಟುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗಿದ್ದು, ನೋಟುಗಳು ಹರಿದು ಹೋಗದಂತೆ ಸಂರಕ್ಷಸಬೇಕಾಗಿದೆ.  ಒಟ್ಟಿನಲ್ಲಿ ನೀವು ನೋಟುಗಳನ್ನು ಪಡೆದುಕೊಳ್ಳುವ ಮುನ್ನ, ಕೊಡುವ ಮುನ್ನ ಎಚ್ಚರಿಕೆಯಿಂದ ವ್ಯವಾಹಾರ ಮಾಡಿದರೆ ಉತ್ತಮ. 2000 ರೂ. ಹಾಗೂ 200 ರೂ. ಮುಖಬೆಲೆಯ ಹೊಸ ನೋಟುಗಳು ಹಾಗೂ ಆನಂತರ ಜಾರಿಗೊಂಡ 10, 20, 50 ಹಾಗೂ 100 ರೂ. ಮುಖ ಬೆಲೆಯ ಮಹಾತ್ಮಾಗಾಂಧಿ ಸರಣಿಯ ನೋಟುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕಿದೆ.

ಇಲ್ಲಿಯವರೆಗೆ ಆರ್.ಬಿ.ಐ. ತಾನು ಬಿಡುಗಡೆಗೊಳಿಸಿದ್ದ ಹೊಸ ನೋಟುಗಳ ಬದಲಾವಣೆಗೆ ಅವಕಾಶ ನೀಡಿರಲಿಲ್ಲ. ಆದರೀಗ ಈ ನೋಟ್ ಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡಿದೆ.  ಆರ್.ಬಿ.ಐ. ಕಚೇರಿ ಹಾಗೂ ನಿಗದಿತ‌ ಬ್ಯಾಂಕ್ ಕೇಂದ್ರದಲ್ಲಿ ಬದಲಾಯಿಸಿಕೊಳ್ಳಬಹುದು ಎಂದು ಆರ್.ಬಿ.ಐ. ಶುಕ್ರವಾರ ತಿಳಿಸಿದೆ‌.

Facebook Comments

Sri Raghav

Admin