ಜಾಲಪ್ಪ ಸಂಸ್ಥೆಯಿಂದ ಕೊಡಗು-ಕೇರಳ ನಿರಾಶ್ರಿತರಿಗೆ 1 ಕೋಟಿ

ಈ ಸುದ್ದಿಯನ್ನು ಶೇರ್ ಮಾಡಿ

Jalappa

ಕೋಲಾರ,ಸೆ.8- ಕೊಡಗು ಹಾಗೂ ಕೇರಳದ ನಿರಾಶ್ರಿತರಿಗೆ ಆರ್.ಎಲ್.ಜಾಲಪ್ಪ ವಿದ್ಯಾಸಂಸ್ಥೆಗಳು ಹಾಗೂ ಆಸ್ಪತ್ರೆ ವತಿಯಿಂದ ಒಂದು ಕೋಟಿ ರೂ. ನೀಡುತ್ತೇವೆಂದು ಸಂಸ್ಥೆಯ ಕಾರ್ಯದರ್ಶಿ ಜಿ.ಎಚ್.ನಾಗರಾಜ್ ತಿಳಿಸಿದರು.  ಸುದ್ದಿಗೋಷ್ಠಿಯಲ್ಲಿ ಒಂದು ಕೋಟಿ ರೂ.ಗಳ ಚೆಕ್‍ಗಳನ್ನು ಪ್ರದರ್ಶಿಸಿ ಮಾತನಾಡಿದ ಅವರು, ಕೋಲಾರ ಮತ್ತು ದೊಡ್ಡ ಬಳ್ಳಾಪುರದಲ್ಲಿರುವ ವಿದ್ಯಾಸಂಸ್ಥೆಗಳು ಮತ್ತು ಆಸ್ಪತ್ರೆ ಸಿಬ್ಬಂದಿಗಳಿಂದ ಒಂದು ದಿನದ ವೇತನ 18 ಲಕ್ಷ ರೂ. ಮತ್ತು ಸಂಸ್ಥೆ ವತಿಯಿಂದ 82 ಲಕ್ಷ ರೂ. ಸೇರಿ ಒಂದು ಕೋಟಿ ದೇಣಿಗೆಯನ್ನು ಕೊಡುಗು ಕೇರಳ ಮುಖ್ಯಮಂತ್ರಿಗಳಿಗೆ ತಲಾ 50 ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ಹೇಳಿದರು.

ದೇಶದಲ್ಲಿ ಈ ಹಿಂದೆ ನಡೆದ ಪ್ರಕೃತಿ ವಿಕೋಪ ಸಂದರ್ಭದಲ್ಲೂ ಜಾಲಪ್ಪ ಸಂಸ್ಥೆಯು ಸಹಾಯ ನೀಡಿತ್ತು.  ಕುಲಾಧಿಪತಿ ಡಾ.ಎಸ್.ಕುಮಾರ್, ಕುಲಪತಿ ಡಾ.ರಘುವೀರ್, ಆಡಳಿತ ಮಂಡಳಿಯ ಹಣಕಾಸು ನಿರ್ದೇಶಕ ಎ.ರಾಜೇಂದ್ರ, ಹನುಮಂತರಾಯ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.  ನಿನ್ನೆ ಸಂಜೆ ನಗರಕ್ಕೆ ಆಗಮಿಸಿದ್ದ ಸಚಿವ ಕೃಷ್ಣ ಭೈರೇಗೌಡರ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂ. ದೇಣಿಗೆಯ ಚೆಕ್‍ನ್ನು ಸಂಸ್ಥೆ ವತಿಯಿಂದ ನೀಡಲಾಯಿತು.

Facebook Comments