ಕಳ್ಳ ಸಾಗಣೆ ಮಾಡುತಿದ್ದ 2 ಚಿಪ್ಪು ಹಂದಿಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟ ಸಿಬ್ಬಂದಿ

ಈ ಸುದ್ದಿಯನ್ನು ಶೇರ್ ಮಾಡಿ

Pig-Chippu-handi
ಚಿಕ್ಕಮಗಳೂರು, ಸೆ.9- ಚಿಪ್ಪು ಹಂದಿ ಕಳ್ಳ ಸಾಗಣೆಯಲ್ಲಿ ಎರಡು ಜೀವಂತ ಚಿಪ್ಪು ಹಂದಿಗಳನ್ನು ಬಾಳೆಹೊನ್ನೂರು ವಲಯದ ಸಿಬ್ಬಂದಿಗಳು ರಕ್ಷಿಸಿ ಮರಳಿ ಕಾಡಿಗೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.  ಬಾಳೆಹೊನ್ನೂರಿನ ಹಲಸೂರು ಮೀಸಲು ಅರಣ್ಯದಲ್ಲಿ ಜೀವಂತ ಚಿಪ್ಪು ಹಂದಿಗಳನ್ನು ಸೆರೆ ಹಿಡಿದು ಅಂತರಾಜ್ಯ ಹಾಗೂ ಅಂತರಾಷ್ಟ್ರೀಯ ವನ್ಯ ಜೀವಿ ಕಳ್ಳ ಸಾಗಣೆದಾರರಿಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುವಾಗ ದಾಳಿ ನಡೆಸಿದ ಅರಣ್ಯ ಸಿಬ್ಬಂದಿಗಳು ಪ್ರದೀಪ್ ಎಂಬಾತನನ್ನು ಸೆರೆ ಹಿಡಿದು ಎರಡು ಜೀವಂತ ಚಿಪ್ಪು ಹಂದಿಗಳನ್ನು ವಶಪಡಿಸಿಕೊಂಡಿದ್ದರು.

ವನ್ಯಜೀವಿ ಸಂರಕ್ಷಣಾ ಕಾಯ್ದೆ ಹಾಗೂ ಕರ್ನಾಟಕ ಅರಣ್ಯ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ ಪ್ರದೀಪನನ್ನು ಎನ್.ಆರ್.ಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆತನನ್ನು ನೀಡಿದೆ.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಕೈಗೊಳ್ಳಲು ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ.  ಎರಡು ಚಿಪ್ಪು ಹಂದಿಗಳು ಲವಲವಿಕೆಯಿಂದ ಕೂಡಿದ್ದು, ವೈದ್ಯರಿಂದ ಪರೀಕ್ಷಿಸಿ ಒಂದು ಹೆಣ್ಣು ಹಾಗೂ ಗಂಡು ಚಿಪ್ಪು ಹಂದಿಗಳನ್ನು ಸುರಕ್ಷಿತವಾಗಿ ಮರಳಿ ಕಾಡಿಗೆ ಬಿಡುವಲ್ಲಿ ಅರಣ್ಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ವನಪಾಲಕರಾದ ಮಂಜುನಾಥ, ಸುಂದರೇಶ್, ಅರಣ್ಯ ರಕ್ಷಕರಾದ ಅಭಿಲಾಶ್, ಶಿವಶಂಕರ್, ಮಹೇಶ್, ಜಯರಾಮ್, ವಾಹನ ಚಾಲಕ ಪ್ರಕಾಶ್ ಇದ್ದರು.  ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ತಾಕತ್ ಸಿಂಗ್ ರಾಣಾವತ್ ಮಾರ್ಗದರ್ಶನದಲ್ಲಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್‍ಅವರ ನೇತೃತ್ವದಲ್ಲಿ ಕಾರ್ಯಾಚರಣೆ  ನಡೆಯಿತು.

# ಚಿಪ್ಪು ಹಂದಿ ಬಗ್ಗೆ ಒಂದಿಷ್ಟು ಮಾಹಿತಿ :
ಚಿಪ್ಪು ಹಂದಿ ಒಂದು ಸಸ್ತನಿಯಾಗಿದೆ.ಇದನ್ನು ಆಂಗ್ಲ ಭಾಶೆಯಲ್ಲಿ ಪೆಂಗೋಲಿನ್ ಎನ್ನುತ್ತಾರೆ.ಇದರ ಗಾತ್ರ ಸುಮಾರು 30 ರಿಂದ 100 ಸೆ.ಮೀ ನವರೆಗೆ ಇರುತ್ತದೆ. ಇವುಗಳಲ್ಲಿ ಕೆಲವು ವರ್ಗಗಳು ಈಗಾಗಲೇ ನಾಶಹೊಂದಿವೆ. ಪೆಂಗೋಲಿನ್ ಎಂಬ ಹೆಸರು ಮಲಯ ಭಾಶೆಯ “ಪೆಂಗ್ಗುಲಿಂಗ್” ಎಂಬ ಪದದಿಂದ ಬಂದಿದೆ. ಇದು ಸಾಮಾನ್ಯವಾಗಿ ಉ‍ಶ್ಣವಲಯದ ದೇಶಗಳಾದ ಆಫ್ರಿಕಾ ಮತ್ತು ಏಶ್ಯಾದಲ್ಲಿ ಇವೆ. ಇವುಗಳಿಗೆ ತಮ್ಮ ಚರ್ಮದ ಮೇಲೆ ಅಗಲವಾದ ಚಿಪ್ಪುಗಳಿವೆ.ಇದು ಇವುಗಳ ಮಾತ್ರ ಪ್ರತ್ಯೇಕತೆಯಾಗಿದೆ.ಇವುಗಳು ಮರದ ಪೊತರೆಗಳಲ್ಲಿ ಮತ್ತು ಮಣ್ಣಿನಲ್ಲಿ ಜೀವಿಸುತ್ತವೆ.ಇವುಗಳು ಇರುವೆ ಮತ್ತು ಗೆದ್ದಲುಗಳನ್ನು ತಿಂದು ಬದುಕುತ್ತವೆ.ಇವುಗಳಗೆ ತಮ್ಮ ಆಹಾರವನ್ನು ಸೇವಿಸುವುದಕ್ಕಾಗಿ ಉದ್ದವಾದ ನಾಲಗೆಯಿದೆ.ಇವು ಒಮ್ಮೆಗೆ 1 ರಿಂದ 3 ಮರಿಗಳಿಗೆ ಜನ್ಮ ನೀದುತ್ತದೆ. ಅರಣ್ಯನಾಶದಿಂದಾಗಿ ಇವು ಈಗ ನಾಶದ ಅಂಚಿನಲ್ಲಿವೆ.

Facebook Comments

Sri Raghav

Admin