ಇಬ್ಬರು ಡ್ರಗ್ಸ್ ಸ್ಮಗ್ಲರ್ ಗಳ ಸೆರೆ, 5 ಕೋಟಿ ರೂ. ಹೆರಾಯಿನ್ ವಶ

ಈ ಸುದ್ದಿಯನ್ನು ಶೇರ್ ಮಾಡಿ

Druge-Smagguers-arrested

ನವದೆಹಲಿ (ಪಿಟಿಐ), ಸೆ.9- ರಾಜಧಾನಿ ದೆಹಲಿಯಲ್ಲಿ ಇಬ್ಬರು ಮಾದಕ ವಸ್ತು ಕಳ್ಳ ಸಾಗಣೆದಾರರನ್ನು ಬಂಧಿಸಿರುವ ಪೊಲೀಸರು, ಐದು ಕೋಟಿ ರೂ. ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.  ಟೀಕಾ ರಾಮ್(33) ಹಾಗೂ ರಾಜ್‍ಪಾಲ್(47) ಬಂಧಿತ ಡ್ರಗ್ಸ್ ಸ್ಮಗ್ಲರ್‍ಗಳು. ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಿಂದ ಮಾದಕ ವಸ್ತು ಖರೀದಿಸಿದ್ದ ಆರೋಪಿಗಳು, ದೆಹಲಿಯಲ್ಲಿನ ಗ್ರಾಹಕರಿಗೆ ಅದನ್ನು ಮಾರಾಲು ಹವಣಿಸುತ್ತಿದ್ದಾಗ ಪೊಲೀಸರು ಬೀಸಿದ ಬಲೆಗೆ ಸಿಕ್ಕಿಬಿದ್ದರು.
ದೆಹಲಿಯ ಕಿಶನ್‍ಗಢ್ ಪ್ರದೇಶದ ಮಚ್ಚಿ ಮಾರುಕಟ್ಟೆ ಬಳಿ ರಾತ್ರಿ 10 ರಿಂದ 11.30ರ ನಡುವೆ ಸ್ಕೂಟರ್‍ನಲ್ಲಿ ರಾಮ್ ಮತ್ತು ರಾಜಪಾಲ್ ಆಗಮಿಸಿ ಹೆರಾಯಿನ್ ಮಾದಕ ವಸ್ತುವನ್ನು ಗಿರಾಕಿಗೆ ಪೂರೈಸಲಿದ್ದಾರೆ ಎಂಬ ಖಚಿತ ಮಾಹಿತಿ ಲಭಿಸಿತ್ತು. ಅದರಂತೆ ಅವರನ್ನು ಬಂಧಿಸಿ ಶೋಧ ನಡೆಸಿದಾಗ ಅವರ ಬಳಿ 500 ಗ್ರಾಂ ತೂಕದ ಮಾದಕ ವಸ್ತು ಪತ್ತೆಯಾಯಿತು. ಅದರ ಮೌಲ್ಯ ಸುಮಾರು 5 ಕೋಟಿ ರೂ.ಗಳು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ(ಅಪರಾಧ) ಅಜಿತ್ ಕುಮಾರ್ ಸಿಂಘ್ಲಾ ತಿಳಿಸಿದ್ದಾರೆ.

ಬಂಧಿತರಲ್ಲಿ ರಾಜ್‍ಪಾಲ್ ಮಾದಕ ವಸ್ತು ವ್ಯಸನಿ ಯಾಗಿದ್ದು, ಈತ ಮೆಹ್ರೌಲಿ ಪ್ರದೇಶದ ಮಹಿಳೆಯೊಬ್ಬರಿಂದ ಡ್ರಗ್ಸ್ ಖರೀದಿಸುತ್ತಿದ್ದ. ಅಲ್ಲದೆ ಅವುಗಳನ್ನು ಮಾರಾಟ ಮಾಡುವ ದಂಧೆಯಲ್ಲೂ ತೊಡಗಿದ್ದ. ಈ ಹಿಂದೆ ಆ ಮಹಿಳೆಯನ್ನು ಎರಡು ಬಾರಿ ಬಂಧಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.  ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

Facebook Comments

Sri Raghav

Admin