ಹೈವೇ ರಾಬರಿಗಳ ಕಿಂಗ್‍ಪಿನ್ ಸೇರಿದಂತೆ 9 ಡಕಾಯಿತರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

9-Robbors-Asrested-IN-Noida

ನೋಯ್ದಾ, ಸೆ.9(ಪಿಟಿಐ)- ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ(ಎಸ್‍ಟಿಎಫ್) ಸಿಬ್ಬಂದಿ ಹೆದ್ದಾರಿ ಡಕಾಯಿತರ ಗ್ಯಾಂಗೊಂದನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.  ಹಲವಾರು ಹೈವೇ ರಾಬರಿಗಳೂ ಸೇರಿದಂತೆ ಗಂಭೀರ ಅಪರಾಧ ಪ್ರಕರಣಗಳಲ್ಲಿ ಬೇಕಿದ್ದ ಕಿಂಗ್‍ಪಿನ್ ಸೇರಿದಂತೆ 9 ಡಕಾಯಿತರನ್ನು ಗ್ರೇಟರ್ ನೋಯ್ಡಾದಲ್ಲಿ ಬಂಧಿಸಲಾಗಿದೆ.  ಬಂಧಿತರಿಂದ ಒಂದು ಹೋಂಡಾ ಸಿಟಿ ಕಾರು, ಎರಡು ಮಾರುತಿ ಇಕೋ ವಾಹನಗಳು, 70,000 ರೂ. ನಗದು, ಎರಡು ಪಿಸ್ತೂಲ್‍ಗಳು, ಮಾರಾಕಾಸ್ತ್ರಗಳು, ಕಂಪ್ಯೂಟರ್ ಮಾನಿಟರ್‍ಗಳು, 388 ಮೊಬೈಲ್ ಫೋನ್‍ಗಳು, 120 ಜೊತೆ ಷೂಗಳು, 10 ಜೊತೆ ಚಪ್ಪಲಿಗಳು, ಬೆಲ್ಟ್‍ಗಳು ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಉತ್ರರ ಪ್ರದೇಶ, ಹರ್ಯಾಣ, ದೆಹಲಿ ಮತ್ತು ರಾಜಸ್ತಾನ ರಾಜ್ಯಗಳ ಹೆದ್ದಾರಿಗಳಲ್ಲಿ ಸರಕು ಸಾಗಣೆ ಟ್ರಕ್‍ಗಳನ್ನು ಗುರಿಯಾಗಿಟ್ಟುಕೊಂಡು ಈ ಡಕಾಯಿತರು ದಾಳಿ ನಡೆಸುತ್ತಿದ್ದರೆಂದು ಎಸ್‍ಟಿಎಫ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.  ಅಮೆಜಾನ್ ಸೇರಿದಂತೆ ಇ-ಕಾಮರ್ಸ್ ವಸ್ತುಗಳನ್ನು ಸಾಗಿಸುತ್ತಿದ್ದ ವಾಹನಗಳನ್ನು ಸಹ ಗುರಿಯಾಗಿಟ್ಟುಕೊಂಡು ಈ ಗ್ಯಾಂಗ್ ಡಕಾಯಿತಿ ನಡೆಸುತ್ತಿತ್ತು. ಹರ್ಯಾಣದ ವಿನೀತ್ ಈ ಗ್ಯಾಂಗ್‍ನ ನಾಯಕ. ಈ ನಾಲ್ಕು ರಾಜ್ಯಗಳ ಹೆದ್ದಾರಿಗಳಲ್ಲಿ ಇತ್ತೀಚೆಗೆ ನಡೆದ ಬಹುತೇಕ ರಾಬರಿ ಪ್ರಕರಣಗಳಲ್ಲಿ ಇವರು ಪೊಲೀಸರಿಗೆ ಬೇಕಾಗಿದ್ದರು.

Facebook Comments

Sri Raghav

Admin