ಹೈದರಾಬಾದ್ ಸ್ಫೋಟ ಪ್ರಕರಣ : ಇಬ್ಬರು ಅಪರಾಧಿಗಳಿಗೆ ಗಲ್ಲು, ಒಬ್ಬನಿಗೆ ಜೀವಾವಧಿ ಶಿಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

Hydarabad--11

ಹೈದರಾಬಾದ್, ಸೆ.10: ಹೈದರಾಬಾದ್‌ನಲ್ಲಿ 2007ರಲ್ಲಿ ನಡೆದ ಅವಳಿ ಬಾಂಬ್‌ ಸ್ಫೋಟ ಪ್ರಕಣಕ್ಕೆ ಸಂಬಂಧಿಸಿದಂತೆ ಆರೋಪಿ ತಾರಿಕ್ ಅಂಜುಂನನ್ನು ತಪಿತಸ್ಥ ಎಂದು ಘೋಷಿಸಿರುವ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯ, ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಅನೀಕ್‌ ಶಫೀಕ್‌ ಸೈಯದ್‌ ಮತ್ತು ಮೊಹಮ್ಮದ್‌ ಅಕ್ಬರ್‌ ಇಸ್ಮಾಯಿಲ್‌ ಚೌಧರಿ ದೋಷಿ ಎಂದು ಸೆ.4ರಂದು ನ್ಯಾಯಾಲಯ ತೀರ್ಪು ನೀಡಿತ್ತು. ಇಂದು ಈ ಇಬ್ಬರೂ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.

ಈ ಪ್ರಕರಣದಲ್ಲಿ ಇಬ್ಬರನ್ನು ಅಪರಾಧಿಗಳು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ ಐಎ) ನ್ಯಾಯಾಲಯವು ಘೋಷಿಸಲಾಗಿದ್ದು, ಇಬ್ಬರಿಗೆ ಖುಲಾಸೆಯಾಗಿದೆ. ಅನೀಕ್ ಶಫೀಕ್ ಸೈಯದ್, ಅಕ್ಬರ್ ಇಸ್ಮಾಯಿಲ್ ಚೌಧರಿ ಇಬ್ಬರನ್ನು ಅಪರಾಧಿ ಎಂದು ತೀರ್ಪು ನೀಡಲಾಗಿದೆ. ಫರೂಕ್ ಶರ್ಫುದ್ದೀನ್ ತರ್ಕಶ್ ಹಾಗೂ ಮೊಹಮ್ಮದ್ ಸಾದಿಕ್ ಇಸ್ರಾಸ್ ಅಹ್ಮದ್ ಶೈಕ್ ಅವರಿಗೆ ಖುಲಾಸೆಯಾಗಿದೆ.

ಇಂಡಿಯನ್ ಮುಜಾಹೀದ್ದೀನ್ ಸ್ಥಾಪಕರಾದ ಕರ್ನಾಟಕ ಮೂಲದ ರಿಯಾಜ್ ಭಟ್ಕಳ, ಇಕ್ಬಾಲ್ ಭಟ್ಕಳ ಅವರ ವಿರುದ್ಧ ಕೂಡಾ ತೆಲಂಗಾಣ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇಬ್ಬರು ಸದ್ಯ ನಾಪತ್ತೆಯಾಗಿದ್ದಾರೆ. 2007ರಲ್ಲಿ ಹೈದರಾಬಾದ್ ನಗರದಲ್ಲಿ ನಡೆದ ಒಂದು ಬಾಂಬ್ ಸ್ಫೋಟದಲ್ಲಿ 32 ಮಂದಿ ಮೃತಪಟ್ಟರೆ, ಮತ್ತೊಂದರಲ್ಲಿ 11 ಮಂದಿ ಸಾವನ್ನಪ್ಪಿದ್ದರು. ನೂರಾರು ಮಂದಿ ಗಾಯಗೊಂಡಿದ್ದರು. ತೆಲಂಗಾಣ ಪೊಲೀಸ್ ಇಲಾಖೆಯ ದಿ ಕೌಂಟರ್ ಆಫ್ ಇಂಟಲಿಜೆನ್ಸ್ ತಂಡವು ಈ ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ನಡೆಸಿತ್ತು.

Facebook Comments

Sri Raghav

Admin