ಮೂರನೇ ಮದುವೆಯಾಗಿದ್ದ ಶಿಕ್ಷಕಿ ಕೊಲೆ ಪ್ರಕರಣದ ಆರೋಪಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

 

murder-arreste
ತುಮಕೂರು, ಸೆ.10-ಮೂರನೇ ಮದುವೆಯಾಗಿದ್ದ ಮಹಿಳೆಯೊಬ್ಬರ ಅನುಮಾನಾಸ್ಪದ ಸಾವು ಪ್ರಕರಣವನ್ನು ಭೇದಿಸಿರುವ ಪೊಲೀಸರು ಟೈಲರ್ ವೃತ್ತಿ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಆರ್.ಟಿ.ನಗರದಲ್ಲಿ ವಾಸವಾಗಿದ್ದ ಪರ್ವೀನ್‍ತಾಜ್ (42) ಅನುಮಾನಾಸ್ಪದವಾಗಿ ನಿನ್ನೆ ಸಾವನ್ನಪ್ಪಿರುವ ಮಹಿಳೆ.
ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಪರ್ವಿನ್‍ತಾಜ್ ಈ ಮೊದಲು ಇಬ್ಬರನ್ನು ಮದುವೆಯಾಗಿದ್ದು, ಅವರಿಂದ ವಿಚ್ಛೇದನ ಪಡೆದು ನಾಲ್ಕು ವರ್ಷಗಳ ಹಿಂದೆ ಇಸ್ಮಾಯಿಲ್ ಎಂಬಾತನನ್ನು ಮೂರನೇ ಮದುವೆಯಾಗಿ ಆರ್.ಟಿ.ನಗರದಲ್ಲಿ ವಾಸವಿದ್ದರು.

ಕಳೆದ ಹತ್ತು ತಿಂಗಳಿನಿಂದ ದಂಪತಿ ಮಧ್ಯೆ ಕೌಟುಂಬಿಕ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಹಿರಿಯರ ಸಮ್ಮುಖದಲ್ಲಿ ರಾಜೀ ಪಂಚಾಯ್ತಿ ನಡೆಸಿ ಸಮಸ್ಯೆ ಬಗೆಹರಿಸಿಕೊಂಡಿದ್ದರು. ಈ ನಡುವೆ ಮೂರು ದಿನಗಳ ಹಿಂದೆ ಪತಿ ಇಸ್ಮಾಯಿಲ್ ಮನೆಯಿಂದ ಹೊರ ಹೋಗಿದ್ದವರು ವಾಪಸ್ಸಾಗಿರಲಿಲ್ಲ. ನಿನ್ನೆ ಬೆಳಗ್ಗೆ ಈತನ ಪತ್ನಿ ಪರ್ವೀನ್‍ತಾಜ್ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.  ಸುದ್ದಿ ತಿಳಿದ ಪರ್ವೀನ್‍ತಾಜ್ ಕುಟುಂಬದವರು ಸ್ಥಳಕ್ಕಾಗಮಿಸಿ ಇಸ್ಮಾಯಿಲ್ ವಿರುದ್ಧ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿ ಮೃತಳ ಪತಿ ಇಸ್ಮಾಯಿಲ್‍ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ತಾನು ಕೊಲೆ ಮಾಡಿಲ್ಲವೆಂದು ಹೇಳಿಕೆ ನೀಡಿದ್ದಾರೆ.

ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿ ಇವರ ಮನೆ ಪಕ್ಕದಲ್ಲಿನ ಟೈಲರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆಸೀಫ್ ಮೇಲೆ ನೆರೆ ಮನೆಯವರು ಸಂಶಯ ವ್ಯಕ್ತಪಡಿಸಿದ್ದರು. ತಿಲಕ್‍ಪಾರ್ಕ್ ವೃತ್ತ ನಿರೀಕ್ಷಕರಾದ ರಾಧಾಕೃಷ್ಣ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿ ಆಸೀಫ್‍ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.  ಈ ವೇಳೆ ಆಸೀಫ್ ಪೊಲೀಸರ ಮುಂದೆ ತಾನೇ ಪರ್ವೀನ್‍ತಾಜ್‍ನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಿನ್ನೆ ಬೆಳಗ್ಗೆ 9 ಗಂಟೆ ಸಮಯದಲ್ಲಿ ಇವರ ಮನೆಯ ಹಿಂಬಾಗಿಲಿನಿಂದ ಒಳನುಗ್ಗಿ ಪರ್ವೀನ್‍ತಾಜ್ ಧರಿಸಿದ್ದ ದುಪ್ಪಟ್ಟದಿಂದ ಆಕೆಯ ಕುತ್ತಿಗೆ ಬಿಗಿದು ನಂತರ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ಆಕೆಯ ಮೈಮೇಲಿದ್ದ ಆಭರಣಗಳನ್ನು ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಈತನ ಹೇಳಿಕೆ ಮೇರೆಗೆ ಪರ್ವೀನ್‍ತಾಜ್‍ಳ ಹಲವು ಆಭರಣಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮಕೈಗೊಂಡಿದ್ದಾರೆ.  ಘಟನಾ ಸ್ಥಳಕ್ಕೆ ಎಸ್‍ಪಿ ಡಾ.ದಿವ್ಯಾಗೋಪಿನಾಥ್, ಡಿವೈಎಸ್ಪಿ ನಾಗರಾಜ್ ಭೇಟಿ ನೀಡಿದ್ದರು.

Facebook Comments

Sri Raghav

Admin