ಬಾಬರಿ ಮಸೀದಿ ವಿಚಾರಣೆ ಹೇಗೆ ಮುಗಿಸುತ್ತೀರಿ..? : ಸುಪ್ರೀಂ ಪ್ರಶ್ನೆ

ಈ ಸುದ್ದಿಯನ್ನು ಶೇರ್ ಮಾಡಿ

Babri-Case

ನವದೆಹಲಿ, ಸೆ.10 (ಪಿಟಿಐ)- ಬಿಜೆಪಿ ಧುರೀಣರು ಆರೋಪಿಗಳಾಗಿರುವ ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಸುಪ್ರೀಂಕೋರ್ಟ್, ಉತ್ತರಪ್ರದೇಶದ ಲಕ್ನೋದ ವಿಚಾರಣಾ ನ್ಯಾಯಾಲಯವೊಂದರ ಸೆಷನ್ಸ್ ನ್ಯಾಯಾಧೀಶರನ್ನು ಪ್ರಶ್ನಿಸಿದೆ.

ಬಿಜೆಪಿ ಧುರೀಣ ಎಲ್.ಕೆ.ಆಡ್ವಾಣಿ, ಡಾ.ಮುರಳಿ ಮನೋಹರ ಜೋಷಿ ಮತ್ತು ಉಮಾ ಭಾರತಿ ಅವರು ಆರೋಪಿಗಳಾಗಿರುವ ಈ ಪ್ರಕರಣದ ವಿಚಾರಣೆಯನ್ನು ಮುಂದಿನ ವರ್ಷ ಏಪ್ರಿಲ್ ಒಳಗೆ ಪೂರ್ಣಗೊಳಿಸಲು ಕಾಲ ನಿಗದಿಗೊಳಿಸಲಾಗಿದೆ. ಈ ಸಂಬಂಧ ವಿಚಾರಣೆ ನಡೆಸುತ್ತಿರುವ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶ ಎಸ್.ಕೆ.ಯಾದವ್ ಅವರನ್ನು ಸುಪ್ರೀಂಕೋರ್ಟ್ ಈ ಕುರಿತು ಪ್ರಶ್ನಿಸಿದೆ.

ವಿಚಾರಣೆ ಪೂರ್ಣಗೊಳಿಸುವಂತೆ ಸುಪ್ರೀಂಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಅಲಹಾಬಾದ್ ಹೈಕೋರ್ಟ್‍ನಿಂದ ತಮ್ಮ ಪದೋನ್ನತಿಗೆ ತಡೆಯಾಜ್ಞೆ ನೀಡಿರುವ ಬಗ್ಗೆ ಯಾದವ್ ಸಲ್ಲಿಸಿರುವ ಮನವಿ ಬಗ್ಗೆ ಪ್ರತ್ಯುತ್ತರ ನೀಡುವಂತೆ ನ್ಯಾಯಮೂರ್ತಿಗಳಾದ ಆರ್.ಎಫ್.ನಾರಿಮನ್ ಮತ್ತು ಇಂದು ಮಲ್ಹೋತ್ರಾ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ಪೀಠ ಉತ್ತರ ಪ್ರದೇಶ ಸರ್ಕಾರದಿಂದ ಪ್ರತ್ಯುತ್ತರ ಕೇಳಿದೆ.

Facebook Comments

Sri Raghav

Admin