ಭಾರತ್ ಬಂದ್ : ರಸ್ತೆ ಮಧ್ಯೆ ಕಾಫಿ ಮಾಡಿ ಕುಡಿದು ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Protest-make-Coffe-On-Road
ಕೋಲಾರ, ಸೆ.10-ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಇಂದು ಕರೆ ನೀಡಿದ್ದ ಭಾರತ್ ಬಂದ್ ಮಾಲೂರು ಹೊರತುಪಡಿಸಿ ಜಿಲ್ಲೆಯಲ್ಲಿ ಯಶಸ್ವಿಯಾಯಿತು.
ಶಾಲಾ- ಕಾಲೇಜು ಗಳಿಗೆ ರಜೆ ಘೋಷಿಸಿದ್ದ ರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿಲ್ಲ. ಕೆಎಸ್‍ಆರ್‍ಟಿಸಿ ಬಸ್‍ಗಳ ಸಂಚಾರವಿಲ್ಲದೆ ಪ್ರಯಾಣಿಕರು ಪರದಾಡಬೇಕಾಯಿತು. ಬೆಳಿಗ್ಗೆ 6 ಗಂಟೆಯಿಂದಲೇ ಕಾಂಗ್ರೆಸ್, ಜೆಡಿಎಸ್ ಹಾಗೂ ವಿವಿಧ ಸಂಘಟನೆಗಳವರು ಮಳೆಯ ನಡುವೆಯೇ ಮೆರವಣಿಗೆ ನಡೆಸಿದರು. ಕೆಲವರು ಪ್ರತ್ಯೇಕವಾಗಿ ಮೆರವಣಿಗೆ ಮಾಡಿದರು. ಅಂಗಡಿ ಮುಂಗಟ್ಟುಗಳು, ಚಲನಚಿತ್ರ ಮಂದಿರಗಳು ಮುಚ್ಚಿದ್ದವು. ಕಾಂಗ್ರೆಸ್‍ನವರು ಗ್ಯಾಸ್‍ಸ್ಟೌವ್ ಹಚ್ಚಿಕೊಂಡು ರಸ್ತೆ ಮಧ್ಯೆ ಕಾಫಿ ಮಾಡಿ ಕುಡಿಯುತ್ತಿದ್ದುದು ಕಂಡು ಬಂದಿತು. ಕತ್ತೆ ಮೇಲೆ ಸಿಲಿಂಡರ್ ಇಟ್ಟು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಾರೆಡ್ಡಿ ನೇತೃತ್ವದಲ್ಲಿ ಎತ್ತಿನಗಾಡಿ ಮೆರವಣಿಗೆ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಮಾಲೂರು: ಮಾಲೂರಿನಲ್ಲಿ ವಿನಾಯಕ ಹೊಟೇಲ್ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ದಾಳಿ ಮಾಡಿ ಮಾಲೀಕ ಮಧು ಎಂಬುವರಿಗೆ ಥಳಿಸಿ ತಿಂಡಿ ಚೆಲ್ಲಾಡಿದ ಘಟನೆ ವರದಿಯಾಗಿದೆ. ಅಂಜನಿಭರತ್ ನೇತೃತ್ವದಲ್ಲಿ ಕಾಂಗ್ರೆಸ್ಸಿಗರು ಸೈಕಲ್ ಜಾಥಾ ನಡೆಸಿದರು.

Facebook Comments