ಭಾರತ್‍ ಬಂದ್‍ಗೆ ಮಗು ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

child-dead-in-bharata-bhand

ಜಹನಾಬಾದ್, ಸೆ.10-ಭಾರತ್ ಬಂದ್ ಪ್ರತಿಭಟನೆ ವೇಳೆ ಸಕಾಲದಲ್ಲಿ ಆ್ಯಂಬುಲೆನ್ಸ್ ಬಾರದೆ ಚಿಕಿತ್ಸೆ ವಂಚಿತ ಮಗುವೊಂದು ಮೃತಪಟ್ಟಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಜಹನಾಬಾದ್‍ನಲ್ಲಿ ಪುಟ್ಟ ಮಗುವೊಂದು ತೀವ್ರ ಅನಾರೋಗ್ಯಕ್ಕೆ ಒಳಗಾಗಿತ್ತು. ಮಗುವನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್‍ಗೆ ಕರೆ ಮಾಡಲಾಗಿತ್ತು. ಆದರೆ ಭಾರತ್ ಬಂದ್ ಪ್ರಯುಕ್ತ ಸಕಾಲದಲ್ಲಿ ಆ್ಯಂಬುಲೆನ್ಸ್ ಬರಲಿಲ್ಲ. ಇದರಿಂದ ಮಗುವಿನ ಅನಾರೋಗ್ಯ ಉಲ್ಬಣಗೊಂಡು ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಮೃತಪಟ್ಟಿತು. ಈ ಘಟನೆಯಿಂದ ಮಗುವಿನ ಕುಟುಂಬ ಸದಸ್ಯರು, ಬಂಧು-ಮಿತ್ರರು ಭಾರತ್ ಬಂದ್ ಪ್ರತಿಭಟನಾಕಾರರಿಗೆ ಹಿಡಿಶಾಪ ಹಾಕಿದ್ದಾರೆ.

Facebook Comments

Sri Raghav

Admin