ಸಂಜೆ ವೇಳೆಗೆ ಬೆಚ್ಚಿಬೀಳಿಸುವ ಸುದ್ದಿ..! ಮೈತ್ರಿ ಸರ್ಕಾರಕ್ಕೆ ಶುರುವಾಯ್ತಾ ಕೌಂಟ್‌ಡೌನ್‌ ?

ಈ ಸುದ್ದಿಯನ್ನು ಶೇರ್ ಮಾಡಿ

CM-And-DCM-Kumaraswamy
ಬೆಳಗಾವಿ,ಸೆ.10- ಇಂದು ಸಂಜೆ ವೇಳೆಗೆ ರಾಜ್ಯದಲ್ಲಿ ಬೆಚ್ಚಿಬೀಳಿಸುವ ಸುದ್ದಿಯೊಂದು ಹೊರಬೀಳಲಿದೆ. ಸರ್ಕಾರ ಪತನಕ್ಕೆ ಕೌಂಟ್‍ಡೌನ್ ಶುರುವಾಗಲಿದೆ. ಇದಕ್ಕೆಲ್ಲಾ ಮಾಸ್ಟರ್ ಪ್ಲ್ಯಾನ್ ಜಿಲ್ಲೆಯಲ್ಲಿ ಸಿದ್ಧವಾಗಿದೆ. ಸರ್ಕಾರ ಅಸ್ಥಿರಗೊಳಿಸಲು 23 ಜನ ಕಾಂಗ್ರೆಸ್ ಶಾಸಕರು ತಯಾರಾಗಿದ್ದಾರೆ. 22 ಜನ ಶಾಸಕರ ಪಟ್ಟಿಯೊಂದಿಗೆ ರಮೇಶ ಜಾರಕಿಹೊಳಿ ಬೆಂಗಳೂರು ವಿಮಾನ ಹತ್ತಿದ್ದಾರೆ. ಇಂದು ಮಧ್ಯಾಹ್ನದ ವೇಳೆಗೆ ಭಿನ್ನಮತ ಸ್ಫೋಟಗೊಂಡು ಸರ್ಕಾರ ಪತನವಾಗುವುದು ಖಚಿತ.

ಹೌದು..ಹೀಗೊಂದು ಸುದ್ದಿ ನಗರದಲ್ಲಿ ಇಂದು ಬೆಳಗ್ಗಿನಿಂದಲೇ ಭಾರೀ ಸದ್ದು ಮಾಡುತ್ತ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರನ್ನು ಬೆಚ್ಚಿಬೀಳಿಸಲಾರಂಭಿಸಿದೆ.
ಜಿಲ್ಲೆಯಿಂದ ರಮೇಶ ಜಾರಕಿಹೊಳಿ, ಮಹೇಶ ಕುಮಟೊಳ್ಳಿ, ಶ್ರೀಮಂತ ಪಾಟೀಲ ಬಿಜೆಪಿ ಸೇರುತ್ತಾರೆ. ಆದರೆ ಸತೀಶ ಜಾರಕಿಹೊಳಿ ಅವರು ರಮೇಶ್ ಜೊತೆಗೆ ಬಿಜೆಪಿ ಸೇರುತ್ತಿಲ್ಲ ಎನ್ನುವ ಮಾಹಿತಿ ಕೂಡಾ ಲಭ್ಯವಾಗಿದೆ.

ಶಾಸಕರ ಈ ನಡೆಯಿಂದ ಕಾಂಗ್ರೆಸ್ ಹೈರಾಣಾಗಿದೆ. ಹೇಗಾದರೂ ಮಾಡಿ ಸರ್ಕಾರ ಉಳಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನ ಮುಂದುವರೆಸಿದೆ. ಇಂದು ಮಧ್ಯಾಹ್ನದ ಹೊತ್ತಿಗೆ ಕಾಂಗ್ರೆಸ್ ಹೈಕಮಾಂಡ್ ಭಿನ್ನಮತೀಯರ ವಿರುದ್ಧ ಶಿಸ್ತು ಕ್ರಮ ಜರುಗಿಸಲಿದೆ ಎಂದು ಹೇಳಲಾಗುತ್ತಿದೆ. ಸಚಿವ ರಮೇಶ್ ಜಾರಕಿಹೊಳಿ ಸರ್ಕಾರ ಪತನಗೊಳಿಸುವ ನಿಟ್ಟಿನಲ್ಲಿ ಗಂಭೀರ ಆಗಿದ್ದಾರೆ ಎಂದು ತಿಳಿದು ಬಂದಿದ್ದು ಸತೀಶ ಜಾರಕಿಹೊಳಿ ಅವರಿಗೆ ಒಂದು ವರ್ಷ ಸಿಎಂ ಸ್ಥಾನ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ. ರಮೇಶ ಜಾರಕಿಹೊಳಿ ಬೆಂಗಳೂರಿಗೆ ತೆರಳಿದ್ದು ಶ್ರೀರಾಮಲು ಜೊತೆ ಮಾತುಕತೆ ನಡೆಸಿದ ನಂತರ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಆ ನಂತರ ತಮ್ಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

Facebook Comments

Sri Raghav

Admin