ಒಳಚರಂಡಿ ಸ್ವಚ್ಚಗೊಳಿಸುವಾಗ ಉಸಿರುಗಟ್ಟಿ ಐವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

5-Killed--01

ನವದೆಹಲಿ, ಸೆ.10 (ಪಿಟಿಐ)-ಒಳಚರಂಡಿ ಸ್ವಚ್ಚಗೊಳಿಸುವಾಗ ಐವರು ಜಾಡಮಾಲಿಗಳು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ರಾಜಧಾನಿ ದೆಹಲಿಯ ಮೋತಿ ನಗರ ಪ್ರದೇಶದಲ್ಲಿ ನಿನ್ನೆ ನಡೆದಿದೆ. ಮೃತಪಟ್ಟವರೆಲ್ಲರೂ 22 ರಿಂದ 30 ವರ್ಷಗಳ ಖಾಸಗಿ ಪೌರಕಾರ್ಮಿಕರು. ನಿನ್ನೆ ಅಪರಾಹ್ನ ಈ ಐವರು ಮೋತಿ ನಗರದ ಡಿಎಲ್‍ಎಫ್ ಫ್ಲಾಟ್ ಬಳಿ ಒಳಚರಂಡಿ ಸ್ವಚ್ಚಗೊಳಿಸುತ್ತಿದ್ದಾಗ ವಿಷಪೂರಿತ ಗಾಳಿ ಹೊರಹೊಮ್ಮಿ ಇಬ್ಬರು ಮೃತಪಟ್ಟರು, ಉಳಿದ ಮೂವರು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ಅಸುನೀಗಿದರು.

ದೆಹಲಿಯಲ್ಲಿ ಇಂಥ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿದ್ದು, ಇದಕ್ಕೆ ಆಮ್ ಆದ್ಮಿ ಪಾರ್ಟಿ(ಎಎಪಿ) ಸರ್ಕಾರವೇ ನೇರ ಕಾರಣ ಎಂದು ಬಿಜೆಪಿ ಆರೋಪಿಸಿದೆ. ಮೃತರ ಕುಟುಂಬಗಳಿಗೆ ತಲಾ 50 ಲಕ್ಷ ರೂ.ಗಳ ಪರಿಹಾರ ನೀಡಬೇಕೆಂದು 99ನೇ ವಾರ್ಡ್‍ನ ಕೌನ್ಸಿಲರ್ ಸುನಿತಾ ಮಿಶ್ರಾ ದೆಹಲಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

Facebook Comments

Sri Raghav

Admin