ಭಾರತ್ ಬಂದ್ ದಿನವೇ ತೈಲ ಬೆಲೆಯಲ್ಲಿ ಏರಿಕೆ, ಮುಂಬೈನಲ್ಲಿ 88.12 ರೂ. ದಾಟಿದ ಪೆಟ್ರೋಲ್ ಬೆಲೆ

ಈ ಸುದ್ದಿಯನ್ನು ಶೇರ್ ಮಾಡಿ

petrol-price-down

ಮುಂಬೈ,ಸೆ.10- ಇಂದು ಮತ್ತೆ ತೈಲ ಬೆಲೆಯಲ್ಲಿ ಏರಿಕೆಯಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ 23 ಪೈಸೆ ಹಾಗೂ ಡಿಸೇಲ್ ಬೆಲೆಯಲ್ಲಿ ಪ್ರತಿ ಲೀಟರ್‍ಗೆ 22 ಪೈಸೆ ಏರಿಕೆ ಕಂಡು ಬಂದಿದೆ. ಇದರಿಂದ ಪೆಟ್ರೋಲ್ 80.73 ಹಾಗೂ ಡಿಸೇಲ್ ಬೆಲೆ 72.83 ಆಗಿದೆ. ಇನ್ನು ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ದಾಖಲೆಯ 88.12 ರೂಪಾಯಿ ಆಗಿದೆ.

ಕೆಲವು ದಿನಗಳಿಂದ ತೈಲ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇದನ್ನು ಖಂಡಿಸಿ ಇಂದು ದೇಶಾದ್ಯಂತ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಈ ಮಧ್ಯೆಯೂ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಇದೇ ಮೊದಲ ಬಾರಿಗೆ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ದಾಖಲೆಯ ಮಟ್ಟದ ಏರಿಕೆ ಕಂಡು ಬಂದಿದ್ದು, ವಿವಿಧ ನಗರಗಳಲ್ಲಿ ಅವುಗಳ ಬೆಲೆ ಈ ಕೆಳಗಿನಂತಿದೆ.

ವಿವಿಧ ನಗರಗಳಲ್ಲಿ ಪೆಟ್ರೋಲ್‍ ಬೆಲೆ :
ನವದೆಹಲಿ: 80.73 ರೂ. ಕೋಲ್ಕತ್ತಾ: 83.61 ರೂ. ಮುಂಬೈ: 88.12 ರೂ. ಚೆನ್ನೈ: 83.91 ರೂ. ಬೆಂಗಳೂರು: 83.36 ರೂ.

# ವಿವಿಧ ನಗರಗಳಲ್ಲಿ ಡಿಸೇಲ್ ಬೆಲೆ
ನವದೆಹಲಿ: 72.83 ರೂ. ಕೋಲ್ಕತ್ತಾ: 75.68 ರೂ. ಮುಂಬೈ: 77.32 ರೂ.  ಚೆನ್ನೈ: 76.98 ರೂ.   ಬೆಂಗಳೂರು: 75.18 ರೂ.

Facebook Comments

Sri Raghav

Admin