2022ರ ವೇಳೆಗೆ ಭಾರತದಲ್ಲಿ 1.5 ಶತಕೋಟಿಗೇರಲಿದೆ ಮೊಬೈಲ್ ಬಳಕೆದಾರರ ಸಂಖ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

Mobile-USers

ನವದೆಹಲಿ, ಸೆ.10 (ಪಿಟಿಐ)- ದೇಶದಲ್ಲಿ 2022ರ ವೇಳೆ ಮೊಬೈಲ್ ಫೋನ್ ಬಳಕೆದಾರರ ಸಂಖ್ಯೆ 1.5 ಶತಕೋಟಿಗಳಿಗೆ ಏರುವ ಸಾಧ್ಯತೆ ಇದ್ದು, ಅವರಲ್ಲಿ ಮೂರನೇ ಒಂದು ಭಾಗದಷ್ಟು ಮಂದಿ 4-ಜಿ/5-ಜಿ ಸೌಲಭ್ಯ ಹೊಂದಿರುತ್ತಾರೆ ಎಂದು ವರದಿಯೊಂದು ಹೇಳಿದೆ.

ಭಾರತದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು, ಈ ವರ್ಷದ ಜನವರಿಯಿಂದ ಮಾರ್ಚ್ ವೇಳೆಗೆ 45 ದಶಲಕ್ಷದಷ್ಟು ಅತ್ಯಧಿಕ ಪ್ರಮಾಣದ ಗ್ರಾಹಕರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಅಲ್ಲದೇ ಜಾಗತಿಕವಾಗಿ ಮೊಬೈಲ್ ಚಂದಾದಾರರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ.
ಜಾಗತಿಕ ಪಟ್ಟಿಯಲ್ಲಿ ಭಾರತ ಮೊದಲಾಗಿದ್ದರೆ, ಚೀನಾ ನಂತರದ ಸ್ಥಾನದಲ್ಲಿದೆ. ಈ ಮೂರು ತಿಂಗಳ ಅವಧಿಯಲ್ಲಿ ಚೀನಾದಲ್ಲಿ 25 ದಶಲಕ್ಷ ಮಂದಿ ಮೊಬೈಲ್ ಫೋನ್‍ಗೆ ಚಂದಾದಾರರಾಗಿದ್ದಾರೆ.

ಮಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ 1.5 ಶತಕೋಟಿ ದಾಟಲಿದೆ. ಇವರಲ್ಲಿ 520 ದಶಲಕ್ಷ ಮಂದಿ 4-ಜಿ/5-ಜಿ ಗ್ರಾಹಕರಾಗಿರುತ್ತಾರೆ ಎಂದು ಎರಿಕ್‍ಸನ್ ಮೊಬಿಲಿಟಿ ವರದಿ ತಿಳಿಸಿದೆ.   2022ರ ಹೊತ್ತಿಗೆ ದೇಶದಲ್ಲಿ 5-ಜಿ ಸೇವೆ ಲಭ್ಯವಾಗಲಿದ್ದು, ಆರಂಭದಲ್ಲೇ 30 ಲಕ್ಷ ಮಂದಿ ಇದರ ಗ್ರಾಹಕರಾಗಿರುತ್ತಾರೆ. ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆಯಲ್ಲಿಯೂ ಶೇ.60ರಷ್ಟು ಏರಿಕೆಯಾಗಲಿದೆ ಎಂಬ ಅಂಶಗಳನ್ನೂ ಸಹ ವರದಿಯಲ್ಲಿ ತಿಳಿಸಲಾಗಿದೆ.

Facebook Comments

Sri Raghav

Admin