ರಾಹುಲ್ ಋಣ ತೀರಿಸಲು ಕುಮಾರಸ್ವಾಮಿ ಬಂದ್ ಮಾಡಿಸಿದ್ದಾರೆ : ಪ್ರತಾಪ್‍ಸಿಂಹ

ಈ ಸುದ್ದಿಯನ್ನು ಶೇರ್ ಮಾಡಿ

Pratap-Simha--014
ಮೈಸೂರು, ಸೆ.10- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರ ಋಣ ತೀರಿಸಲು ಇಂದು ಬಂದ್ ಮಾಡಿಸಿದ್ದಾರೆ ಎಂದು ಸಂಸದ ಪ್ರತಾಪ್‍ಸಿಂಹ ಟೀಕಿಸಿದರು. ದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಇದು ಸರ್ಕಾರಿ ಪ್ರಾಯೋಜಿತ ಬಂದ್ ಆಗಿದೆ. ಜನರ ಹಿತಕ್ಕಾಗಿ ಬಂದ್ ಮಾಡಿಲ್ಲ. ರಾಹುಲ್‍ಗಾಂಧಿ ಭಾರತದಾದ್ಯಂತ ಬಂದ್ ಕರೆ ನೀಡಿದ್ದಾರೆ. ಕಾಂಗ್ರೆಸ್ ಕೃಪೆಯಿಂದ ಸಿಎಂ ಆಗಿರುವುದರಿಂದ ರಾಹುಲ್‍ಗಾಂಧಿಯವರ ಋಣ ತೀರಿಸಲು ಬಂದ್ ಮಾಡಿಸಿದ್ದಾರೆ ಎಂದು ಲೇವಡಿ ಮಾಡಿದರು.

ಈ ಹಿಂದೆ ಅನೇಕ ಬಾರಿ ಬಂದ್‍ಗಳು ನಡೆದಿದ್ದವು. ಆ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಶಾಲಾ-ಕಾಲೇಜಿಗೆ ರಜೆ ಘೋಷಿಸಲಿಲ್ಲ. ಈ ಬಾರಿ ಡಿಸಿ ಮೂಲಕ ರಜೆ ಘೋಷಿಸಿದ್ದಾರೆ. ಬಸ್‍ಗಳನ್ನು ನಿಲ್ಲಿಸಿದ್ದಾರೆ. ಹಾಗಾಗಿ ಇದು ಸರ್ಕಾರಿ ಪ್ರಾಯೋಜಿತ ಬಂದ್ ಎಂದು ಆರೋಪಿಸಿದರು.

ಕುಮಾರಸ್ವಾಮಿಯವರಿಗೆ ತೈಲ ಬೆಲೆ ಏರಿಕೆ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ ಬಜೆಟ್ ಮಂಡಿಸಿದ ಸಂದರ್ಭದಲ್ಲಿ ಶೇ.30ರಷ್ಟಿದ್ದ ಪೆಟ್ರೋಲ್ ತೆರಿಗೆಯನ್ನು ಶೇ.32ಕ್ಕೆ ಏರಿಸುತ್ತಿರಲಿಲ್ಲ. ಶೇ.19ರಷ್ಟಿದ್ದ ಡೀಸೆಲ್ ತೆರಿಗೆಯನ್ನು ಶೇ.20ಕ್ಕೆ ಏರಿಸುತ್ತಿರಲಿಲ್ಲ. ಆಗ ಇವರಿಗೆ ತೆರಿಗೆ ಬೆಲೆ ಏರಿಕೆಯಾಗುವುದು ಗೊತ್ತಿರಲಿಲ್ಲವೆ ಎಂದು ಪ್ರಶ್ನಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ನಾಗೇಂದ್ರ, ಬಿಜೆಪಿ ಮುಖಂಡರಾದ ಮಂಜುನಾಥ್, ಪ್ರಭಾಕರ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin