ಭಾರತ್ ಬಂದ್‍ಗೆ ಸ್ಯಾಂಡಲ್ವುಡ್ ಬೆಂಬಲ

ಈ ಸುದ್ದಿಯನ್ನು ಶೇರ್ ಮಾಡಿ

Navarang

ಬೆಂಗಳೂರು,ಸೆ.10- ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಿಂದ ಸಾರ್ವಜನಿಕರಿಗೆ ತುಂಬ ತೊಂದರೆಯಾಗಿದ್ದು, ಸಾರ್ವಜನಿಕರ ಮೇಲೆ ಚಿತ್ರೋದ್ಯಮಕ್ಕೆ ಸಂಪೂರ್ಣ ಸಹಾನುಭೂತಿ ಇದೆ. ಬೆಲೆ ಏರಿಕೆ ವಿರುದ್ದ ನಡೆಯುತ್ತಿರುವ ಬಂದ್‍ಗೆ ಚಿತ್ರೋದಮ್ಯದ ನೈತಿಕ ಬೆಂಬಲ ಇದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡರು ತಿಳಿಸಿದರು.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಎಲ್ಲರಿಗೂ ತೊಂದರೆಯಾಗಿದೆ. ನಾವು ಕೂಡ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದು, ಇಂದು ಪ್ರದರ್ಶನಗೊಳ್ಳಬೇಕಾಗಿರುವ ಚಿತ್ರಗಳನ್ನು ರದ್ದುಗೊಳಿಸಲಾಗಿದ್ದು, ಸಂಜೆಯ ನಂತರ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ ಎಂದರು.   ಬೆಂಗಳೂರನ್ನು ಹೊರತುಪಡಿಸಿ ಉಳಿದ ಕಡೆ ಚಿತ್ರೀಕರಣ ಚಟುವಟಿಕೆ ನಡೆಯುತ್ತಿದೆ ಎಂದರು.

Facebook Comments

Sri Raghav

Admin