ಸೆಬಿಯಲ್ಲಿ ಸಹಾಯಕ ವ್ಯವಸ್ಥಾಪಕ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

Jobs-011
ಸೆಕ್ಯೂರಿಟಿ ಅಂಡ್ ಎಕ್ಸ್’ಚೇಂಜ್ ಬೋರ್ಡಆಫ್ ಇಂಡಿಯಾ (ಸೆಬಿ) ಎ – ಗ್ರೇಡ್ ಅಧಿಕಾರಿ ಮಟ್ಟದ ಸಹಾಯಕ ವ್ಯವಸ್ಥಾಪಕ (ಜನರಲ್ ಸ್ಟ್ರೀಮ್, ಲೀಗಲ್ ಸ್ಟ್ರೀಮ್, ಮಾಹಿತಿ ತಂತ್ರಜ್ಞಾನ ಸ್ಟ್ರೀಮ್ ಮತ್ತು ಇಂಜಿನಿಯರಿಂಗ್ ಸ್ಟ್ರೀಮ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ – 120
ಹುದ್ದೆಗಳ ವಿವರ
1.ಜನರಲ್ ಸ್ಟ್ರೀಮ್ – 84
2.ಲೀಗಲ್ ಸ್ಟ್ರೀಮ್ – 18
3.ಮಾಹಿತಿ ತಂತ್ರಜ್ಞಾನ ಸ್ಟ್ರೀಮ್ – 08
4.ಇಂಜಿನಿಯರಿಂಗ್ (ಸಿವಿಲ್) ಸ್ಟ್ರೀಮ್ – 05
5.ಇಂಜಿನಿಯರಿಂಗ್ (ಎಲೆಕ್ಟ್ರಿಕಲ್) ಸ್ಟ್ರೀಮ್
ವಿದ್ಯಾರ್ಹತೆ : ಕ್ರ.ಸಂ 1ರ ಹುದ್ದೆಗೆ ಯಾವುದೇ ಪದವಿ, ಕ್ರ.ಸಂ 2ರ ಕಾನೂನು ಪದವಿ, ಕ್ರ.ಸಂ 3,4 ಮತ್ತು 5ರ ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರಬೇಕು.
ವಯೋಮಿತಿ : ಗರಿಷ್ಠ ವಯಸ್ಸನ್ನು 30 ವರ್ಷಕ್ಕೆ ನಿಗದಿ ಮಾಡಲಾಗಿದೆ. ವಯೋಮಿತಿಯಲ್ಲಿ ಮೀಸಲಾತಿ ಪಡೆಯುವವರಿಗೆ ನಿಯಮಗಳ ಪ್ರಕಾರ ಸಡಿಲತೆ ನೀಡಲಾಗಿದೆ.
ಅರ್ಜಿ ಶುಲ್ಕ : ಸಾಮಾನ್ಯ ಮತ್ತು ಹಿಂದುಳಿದ ವರ್ಗದವರಿಗೆ 850 ರೂ, ಪ.ಜಾ, ಪ.ಪಂ ಹಾಗೂ ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ 100 ರೂ ಶುಲ್ಕ ನಿಗದಿಮಾಡಲಾಗಿದೆ.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 15-09-2018
ಹೆಚ್ಚಿನ ಮಾಹಿತಿಗಾಗಿ ಹಾಗೂ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.sebi.gov.in ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin