ಹಿಂದೂ ಅರ್ಥಕ್ಕೆ ಅಸ್ಪಶ್ಯತೆ, ಅಸಹಿಷ್ಣುತೆ ಸೇರಿಸಲು ಯತ್ನ : ಉಪರಾಷ್ಟ್ರಪತಿ ವಿಷಾದ

ಈ ಸುದ್ದಿಯನ್ನು ಶೇರ್ ಮಾಡಿ

Venkaiah-Naidu

ಚಿಕಾಗೋ, ಸೆ.10-ಹಿಂದೂ ಪದಕ್ಕೆ ಕೆಲವರು ಅಸ್ಪಶ್ಯತೆ ಮತ್ತು ಅಸಹಿಷ್ಣುತೆ ಎಂಬ ಅರ್ಥ ಕಲ್ಪಿಸಲು ಯತ್ನಿಸುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿರುವ ಉಪ ರಾಷ್ಟ್ರಪತಿ ಡಾ.ಎಂ.ವೆಂಕಯ್ಯನಾಯ್ಡು, ಹಿಂದುತ್ವದ ವಾಸ್ತವ ಮೌಲ್ಯಗಳನ್ನು ರಕ್ಷಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.

ಅಮೆರಿಕದ ಚಿಕಾಗೋದಲ್ಲಿ ನಡೆದ ಎರಡನೇ ವಿಶ್ವ ಹಿಂದು ಕಾಂಗ್ರೆಸ್(ಡಬ್ಲ್ಯುಎಚ್‍ಸಿ) ಅಧಿವೇಶನದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಸ್ವಾಮಿ ವಿವೇಕಾನಂದರಂಥ ಮಹಾ ಆಧ್ಯಾತ್ಮಿಕ ನಾಯಕರು ತಿಳಿಸಿರುವಂತೆ ಹಿಂದುತ್ವವನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ಭಾರತವು ಸರ್ವಧರ್ಮ ಸಮನ್ವಯತೆ ಮತ್ತು ಜಾಗತಿಕ ಸಹಿಷ್ಣುತೆಯ ರಾಷ್ಟ್ರ. ಎಲ್ಲ ಧರ್ಮಗಳನ್ನು ಗೌರವಿಸುವ ದೇಶ. ಆದರೆ ಕೆಲವು ಮಹಾಸಂತರ ಬೋಧನೆಗಳನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ. ಪವಿತ್ರ ಹಿಂದೂ ಪದಕ್ಕೆ ಅಸ್ಪಶ್ಯತೆ ಮತ್ತು ಅಸಹಿಷ್ಣುತೆ ಎಂಬ ಅರ್ಥ ಕಲ್ಪಿಸಲು ಕೆಲವರು ಯತ್ನಿಸುತ್ತಿದ್ದಾರೆ. ಇದು ವಿಷಾದನೀಯ ಎಂದು ಉಪ ರಾಷ್ಟ್ರಪತಿ ಬೇಸರದಿಂದ ನುಡಿದರು.

ಮೂರು ದಿನಗಳ ಕಾಲ ನಡೆದ ವಿಶ್ವ ಹಿಂದೂ ಕಾಂಗ್ರೆಸ್ ಸಮಾವೇಶವು, 1893ರಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಐತಿಹಾಸಿಕ ಭಾಷಣದ 125ನೇ ವರ್ಷಾಚರಣೆ ಸಂದರ್ಭದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಅಧಿವೇಶನದಲ್ಲಿ 60ಕ್ಕೂ ಹೆಚ್ಚು ದೇಶಗಳಿಂದ 2,500 ಪ್ರತಿನಿಧಿಗಳು ಹಾಗೂ 250 ಪ್ರಮುಖ ಭಾಷಣಕಾರರು ಭಾಗವಹಿಸಿದ್ದರು.

Facebook Comments

Sri Raghav

Admin