ಚಿದಂಬರಂ ಮತ್ತು ಪುತ್ರ ಕಾರ್ತಿಗೆ ಮತ್ತೆ ಎದುರಾಯ್ತು ಕಂಟಕ

ಈ ಸುದ್ದಿಯನ್ನು ಶೇರ್ ಮಾಡಿ

Chidambaram-Son-01
ನವದೆಹಲಿ,ಸೆ.10-ಏರ್‍ಸೆಲ್‍ನಲ್ಲಿ ಅಕ್ರಮವಾಗಿ ಹಣ ಹೂಡಿರುವ ಸಂಬಂಧ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರ ಪುತ್ರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ನೀಡಿರುವ ಮಧ್ಯಂತರ ಜಾಮೀನನ್ನು ರದ್ದುಪಡಿಸುವಂತೆ ಜಾರಿ ನಿರ್ದೇಶನಾಲಯ ಸಿಬಿಐ ವಿಶೇಷ ನಾಯ್ಯಾಲಯಕ್ಕೆ ಮನವಿ ಮಾಡಿದೆ. ಕಾರ್ತಿ ಚಿದಂಬರಂ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕಾದ ಅಗತ್ಯವಿರುವುದರಿಂದ ಈ ಹಿಂದೆ ಸಿಬಿಐ ನ್ಯಾಯಾಲಯ ನೀಡಿರುವ ಮಧ್ಯಂತರ ಜಾಮೀನನ್ನು ರದ್ದುಪಡಿಸಬೇಕೆಂದು ಜಾರಿ ನಿರ್ದೇಶನಾಲಯ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಗೋಪಿ ಸೈನಿ ಅವರಿಗೆ ಮನವಿ ಮಾಡಿದೆ.

ಈ ಹಿಂದೆ ಸಿಬಿಐ ವಿಶೇಷ ನ್ಯಾಯಲಯವು ಕಾರ್ತಿಕ್ ಚಿದಂಬರಂ ಹಾಗೂ ಟಿ.ಚಿದಂಬರಂ ಅವರನ್ನು ಬಂಧಿಸದಂತೆ ಅಕ್ಟೋಬರ್ 8ರವರೆಗೆ ಮಧ್ಯಂತರ ಜಾಮೀನು ನೀಡಿತ್ತು. ಇದರಿಂದ ಅಪ್ಪ-ಮಕ್ಕಳು ಬಂಧನದ ಭೀತಿಯಿಂದ ಪಾರಾಗಿದ್ದರು. ಏರ್‍ಸೆಲ್ ಮ್ಯಾಕ್ಸೆಲ್‍ನಲ್ಲಿ ತಂದೆ ಮಕ್ಕಳು ಕಾನೂನು ಬಾಹಿರವಾಗಿ ಹಣ ಹೂಡಿಕೆ ಮಾಡಿರುವುದಲ್ಲದೆ ಸಾಕಷ್ಟು ಭ್ರಷ್ಟಾಚಾರ ನಡೆಸಿರುವುದರಿಂದ ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕೆಂಬುದು ಸಿಬಿಐ ಮತ್ತು ಇಡಿಯ ವಾದವಾಗಿದೆ.

ಕಳೆದ ಜುಲೈ 19ರಂದು ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಚಾರ್ಜ್‍ಶೀಟ್‍ನಲ್ಲಿ ಚಿದಂಬರಂ ಮತ್ತು ಕಾರ್ತಿಕ್ ಹೆಸರನ್ನು ಉಲ್ಲೇಖಿಸಿದರು. ಜು.13ರಂದು ಏರ್‍ಸೆಲ್ ಮ್ಯಾಕ್ಸೆಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಚಿದಂಬರಂ ಮತ್ತು ಕಾರ್ತಿಕ್ ಚಿದಂಬರಂ ಅವರನ್ನು ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಿತ್ತು. 2006ರಲ್ಲಿ ಕೇಂದ್ರದ ಹಣಕಾಸು ಸಚಿವರಾಗಿದ್ದ ಚಿದಂಬರಂ ವಿದೇಶಿ ಹೂಡಿಕೆ ಉತ್ತಜೇನ ಮಂಡಳಿಯಿಂದ ಅನುಮತಿ ಪಡೆದು ಏರ್‍ಸೆಲ್‍ನಲ್ಲಿ ಹಣ ಹೂಡಿಕೆ ಮಾಡಿದ್ದರು.

ನಿಯಮಗಳ ಪ್ರಕಾರ ಹಣ ಹೂಡಿಕೆ ಮಾಡುವ ಮುನ್ನ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯ ಒಪ್ಪಿಗೆ ಪಡೆಯಬೇಕು. ಇದು ಕಾನೂನಿನ ಉಲ್ಲಂಘನೆ ಎಂಬುದು ತನಿಖಾಧಿಕಾರಿಗಳ ವಾದವಾಗಿದೆ. ಏರ್‍ಸೆಲ್ ಮಾಕ್ಸೆಸ್‍ನ ಮೂರುವರೆ ಸಾವಿರ ಕೋಟಿ ವಹಿವಾಟಿನಲ್ಲಿ ಐಎನ್‍ಎಕ್ಸ್ ಮೀಡಿಯಾಕ್ಕೆ ಕಾರ್ತಿಕ್ ಚಿದಂಬರಂ 305 ಕೋಟಿ ಹಣವನ್ನು ಕಾನೂನು ಬಾಹಿರವಾಗಿ ಹೂಡಿಕೆ ಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಆದರೆ ಇದನ್ನು ಅಪ್ಪ-ಮಕ್ಕಳು ಸಾರಾ ಸಗಟಾಗಿ ತಿರಸ್ಕರಿಸುತ್ತಲೇ ಬಂದಿದ್ದಾರೆ.ನಾವು ಯಾವುದೇ ತಪ್ಪು ಮಾಡಿಲ್ಲ. ಕೇಂದ್ರ ಸರ್ಕಾರ ದುರುದ್ದೇಶಪೂರ್ವಕವಾಗಿ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ನಮ್ಮ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಿದೆ ಎಂದು ದೂರಿದ್ದಾರೆ.

Facebook Comments

Sri Raghav

Admin