ಭಾರತ್ ಬಂದ್ ಮೂಲಕ ವದಂತಿ, ಗೊಂದಲ ಸೃಷ್ಟಿಸುವ ಪ್ರಯತ್ನ : ಬಿಜೆಪಿ ಟೀಕೆ

ಈ ಸುದ್ದಿಯನ್ನು ಶೇರ್ ಮಾಡಿ

mukhtar-abbas-naqvi

ನವದೆಹಲಿ, ಸೆ.10 (ಪಿಟಿಐ)- ಕಾಂಗ್ರೆಸ್ ಮತ್ತು ಹಲವಾರು ವಿರೋಧ ಪಕ್ಷಗಳು ಇಂದು ದೇಶಾದ್ಯಂತ ನಡೆಸುತ್ತಿರುವ ಭಾರತ್ ಬಂದ್ ಜನರಲ್ಲಿ ವದಂತಿ ಹಬ್ಬಿಸುವ ಮತ್ತು ಗೊಂದಲ ಸೃಷ್ಟಿಸುವ ಯತ್ನವಾಗಿದೆ ಎಂದು ಬಿಜೆಪಿ ಟೀಕಿಸಿದೆ.

ಭಾರತ್ ಬಂದ್‍ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮತ್ತು ಬಿಜೆಪಿ ನಾಯಕ ಮುಕ್ತಾರ್ ಅಬ್ಬಾಸ್ ನಕ್ವಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷ ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಾಗಲೆಲ್ಲಾ ಜನರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿದ ಚಾರಿತ್ರಿಕ ಇತಿಹಾಸ ಹೊಂದಿದೆ. ಈಗ ಅದು ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದು ಲೇವಡಿ ಮಾಡಿದರು.  ಕಾಂಗ್ರೆಸ್ ಪಕ್ಷವು ಕೇಂದ್ರದಲ್ಲಿ ಅಧಿಕಾರ ಗದ್ದುಗೆ ಏರುವ ಹಗಲುಗನಸು ಕಾಣುತ್ತಿದೆ. ಆ ಪಕ್ಷದ ಮಹಾ ಮೈತ್ರಿಕೂಟದ ಬಲೂನ್‍ನನ್ನು ದೇಶದ ಜನರು ಪಂಕ್ಚರ್ ಮಾಡಲಿದ್ದಾರೆ ಎಂದು ನಕ್ವಿ ಹೇಳಿದರು.

Facebook Comments

Sri Raghav

Admin