ಕುಂಭಕರ್ಣ ನಿದ್ದೆಯಿಂದ ಎದ್ದು ಹಠಾತ್ ಪ್ರತಿಭಟನೆ ಮಾಡುವುದಲ್ಲ: ಶಿವಸೇನೆ ಲೇವಡಿ

ಈ ಸುದ್ದಿಯನ್ನು ಶೇರ್ ಮಾಡಿ

Shivasene
ಮುಂಬೈ, ಸೆ.10- ಇಂಧನ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಇಂದು ದೇಶಾದ್ಯಂತ ನಡೆಸುತ್ತಿರುವ ಭಾರತ್ ಬಂದ್ ಪ್ರತಿಭಟನೆ ಬಗ್ಗೆ ಶಿವಸೇನೆ ಲೇವಡಿ ಮಾಡಿದೆ.  ಹೆಚ್ಚುತ್ತಿರುವ ಇಂಧನ ಬೆಲೆಗಳ ವಿರುದ್ಧ ಕುಂಭಕರ್ಣ ನಿದ್ದೆಯಿಂದ ಎದ್ದು ದಿಢೀರ್ ಪ್ರತಿಭಟನೆ ಮಾಡುವುದಲ್ಲ. ಈ ವಿಷಯ ಇಂದು ನಿನ್ನೆಯದಲ್ಲ. ದೀರ್ಘಕಾಲದಿಂದಲೂ ಪೆಟ್ರೋಲ್, ಡೀಸೆಲ್ ಬೆಲೆ ಏರುತ್ತಿದೆ. ಇದನ್ನು ನಿಯಂತ್ರಿಸುವ ಜವಾಬ್ದಾರಿಯೂ ಕೂಡ ವಿರೋಧ ಪಕ್ಷಗಳ ಹೆಗಲ ಮೇಲಿದೆ. ಆದರೆ, ಈಗ ದಿಢೀರನೆ ಭಾರತ್ ಬಂದ್‍ಗೆ ಕರೆ ನೀಡಿರುವುದು ಸಮಯೋಚಿತವಲ್ಲ ಎಂದು ಶಿವಸೇನೆ ಹೇಳಿದೆ.  ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಇಂದು ಈ ಸಂಬಂಧ ಪ್ರಕಟವಾಗಿರುವ ಸಂಪಾದಕೀಯದಲ್ಲಿ ಶಿವಸೇನೆ ಸಾರ್ವಜನಿಕ ಜ್ವಲಂತ ವಿಷಯಗಳ ಬಗ್ಗೆ ಧ್ವನಿ ಎತ್ತುವ ವಿರೋಧ ಪಕ್ಷಗಳ ಸಾಮಥ್ರ್ಯ ಹೇಗಿದೆ ಎಂಬುದನ್ನು ತಾನು ಕಾದು ನೋಡುತ್ತಿರುವುದಾಗಿ ಹೇಳಿದೆ.

Facebook Comments

Sri Raghav

Admin