ಮಹಿಳಾ ಪೊಲೀಸ್ ಮೇಲೆ ಕಾನ್‍ಸ್ಟೆಬಲ್ ಹಾಗೂ ಆತನ ಸಹೋದರನಿಂದ ಗ್ಯಾಂಗ್ ರೇಪ್

ಈ ಸುದ್ದಿಯನ್ನು ಶೇರ್ ಮಾಡಿ

Rape-attempt

ಚಂಡೀಗಢ,ಸೆ.10- ಮಹಿಳಾ ಪೊಲೀಸ್ ಮುಖ್ಯ ಪೇದೆ ಮೇಲೆ ಕಾನ್‍ಸ್ಟೆಬಲ್ ಹಾಗೂ ಆತನ ಸಹೋದರ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಬೆಳಕಿಗೆ ಬಂದಿದೆ. ಕಾನ್‍ಸ್ಟೆಬಲ್ ಹಾಗೂ ಆತನ ಸಹೋದರ ಠಾಣೆಯಲ್ಲಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ. ಆದರೆ ತಮ್ಮ ಮೇಲೆ ಕೇಳಿ ಬಂದಿರುವ ಆರೋಪವನ್ನು ಪೇದೆ ಅಲ್ಲಗೆಳೆದಿದ್ದಾನೆ. ಇನ್ನು ದೂರಿನಲ್ಲಿ ತಿಳಿಸಿರುವ ಪ್ರಕಾರ ಪೊಲೀಸ್ ಪೇದೆ ಜೋಗಿಂದರ್2017ರಲ್ಲಿ ತನ್ನ ಸಹೋದರನಿಗೆ ತನ್ನನ್ನು ಪರಿಚಯ ಮಾಡಿಕೊಟ್ಟಿದ್ದಾರೆ.  ಆ ವೇಳೆ ನನ್ನ ಮೇಲೆ ಆತ ಅತ್ಯಾಚಾರಗೈದು, ಹಣಕ್ಕಾಗಿ ಬ್ಲಾಕ್‍ಮೆಲ್ ಸಹ ಮಾಡಿದ್ದಾನೆ ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

Facebook Comments