ಹಾಸನದಲ್ಲಿ ಲಘು ಭೂಕಂಪನ, ಸಾರ್ವಜನಿಕರಲ್ಲಿ ಮನೆಮಾಡಿದ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

Earthquake--01
ಹಾಸನ, ಸೆ.10-ಜಿಲ್ಲೆಯ ಆಲೂರು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಲಘು ಭೂಕಂಪನದ ಅನುಭವವಾಗಿದೆ. ರಾತ್ರಿ 8.16ರಲ್ಲಿ ಭಾರೀ ಸದ್ದು ಕೇಳಿ ಬಂದಿದ್ದು, ಮನೆಗಳಲ್ಲಿದ್ದ ಪಾತ್ರೆಗಳು ಅಲುಗಾಡಿದ ಅನುಭವವಾಗಿದೆಯಂತೆ. ಆಲೂರು ಪಟ್ಟಣದ ರಾಜಪ್ಪ ಬಡಾವಣೆ, ಹಳೇ ಸಂತೆ ಬೀದಿ, ದೊಡ್ಡ ಬೀದಿ, ಆಶಾ ಬಡಾವಣೆ, ದೊಡ್ಡ ಕಣಗಾಲು ಸುತ್ತಮುತ್ತ ಗ್ರಾಮಗಳಲ್ಲಿ ಭೂಮಿ ಕಂಪಿಸಿ ಗುಡುಗಿನಂತಹ ಶಬ್ಧ ಕೇಳಿ ಬಂದಿದ್ದು, ಗ್ರಾಮಸ್ಥರು ಮಳೆ ಬರಲು ಗುಡುಗು ಮಿಂಚು ಬರುತ್ತಿದೆ ಎಂದುಕೊಂಡಿದ್ದರು. ಆದರೆ ಕೆಲ ಸಮಯದಲ್ಲೇ ಮನೆಯಲ್ಲಿನ ಸಾಮಾನುಗಳು ಅಲುಗಾಡಿದ್ದರಿಂದ ಭೂಕಂಪನದ ಅನುಭವವಾಗಿದೆ.
ಈ ಸಂಬಂಧ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

Facebook Comments

Sri Raghav

Admin