ಮೊದಲನೇ ಪತ್ನಿಯ ಆಸ್ತಿಗಾಗಿ ಪೀಡಿಸುತ್ತಿದ್ದ ಎರಡನೇ ಪತ್ನಿಯನ್ನು ಕೊಂದ ಪತಿ..!

ಈ ಸುದ್ದಿಯನ್ನು ಶೇರ್ ಮಾಡಿ

Gudibande-crime

ಗುಡಿಬಂಡೆ, ಸೆ.11- ಆಸ್ತಿ ವಿಚಾರವಾಗಿ ಹೆಂಡತಿಯನ್ನೇ ಹಾರೆಯಿಂದ ತಿವಿದು ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಯರ್ರಾ ಲಕ್ಕೇನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ನಡೆದಿದೆ. ಭಾರತಿ (28) ಗಂಡನಿಂದ ಕೊಲೆಯಾದ ದುರ್ದೈವಿ. ಗಂಗಾಧರ್ (35) ಎಂಬ ವ್ಯಕ್ತಿಗೆ ಈ ಮೊದಲೇ ವಿವಾಹವಾಗಿದ್ದು , ಆಕೆ ಅನಾರೋಗ್ಯದಿಂದ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಭಾರತಿಯನ್ನು ವಿವಾಹವಾಗಿದ್ದ ಎನ್ನಲಾಗಿದೆ. ಆದರೆ ಮೊದಲನೆ ಪತ್ನಿಗೆ ಒಂದು ಹೆಣ್ಣು ಮಗುವಿರುತ್ತದೆ. ಭಾರತಿಗೂ ಸಹ ಒಂದು ಹೆಣ್ಣು , ಒಂದು ಗಂಡು ಮಗು ಇರುತ್ತದೆ. ಆದರೆ ಭಾರತಿ ಆಸ್ತಿಯನ್ನು ನನ್ನ ಮಕ್ಕಳಿಗೆ ನೀಡಬೇಕು ಎಂದು ಪ್ರತಿ ದಿನ ಜಗಳವಾಡುತ್ತಿದ್ದ. ನಿನ್ನೆಯೂ ಸಹ ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು , ನೇಗಿಲಿಗೆ ಅಳವಡಿಸುವ ಹಾರೆಯಿಂದ ತಲೆಗೆ ಹೊಡೆದಿದ್ದಾನೆ. ತಲೆಗೆ ಗಂಭೀರವಾದ ಪೆಟ್ಟು ಬಿದ್ದ ಪರಿಣಾಮ ಭಾರತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಗುಡಿಬಂಡೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿ ಗಂಗಾಧರನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin