ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್‌ ನಲ್ಲೂ ಸೋತು1-4 ಅಂತರದಲ್ಲಿ ಸರಣಿ ಕಳೆದುಕೊಂಡ ಭಾರತ

ಈ ಸುದ್ದಿಯನ್ನು ಶೇರ್ ಮಾಡಿ

England--01

ಲಂಡನ್, ಸೆ.11: ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ 118 ರನ್‌ಗಳ ಸೋಲು ಅನುಭವಿಸಿದ್ದು, 5 ಟೆಸ್ಟ್‌ಗಳ ಸರಣಿಯನ್ನು 1-4 ಅಂತರದಲ್ಲಿ ಕಳೆದುಕೊಂಡಿದೆ. ಟೆಸ್ಟ್‌ನ ಅಂತಿಮ ದಿನವಾಗಿರುವ ಮಂಗಳವಾರ ಗೆಲುವಿಗೆ ಎರಡನೇ ಇನಿಂಗ್ಸ್‌ನಲ್ಲಿ 464 ರನ್ ಗಳಿಸಬೇಕಿದ್ದ ಟೀಮ್ ಇಂಡಿಯಾ 94.3 ಓವರ್‌ಗಳಲ್ಲಿ 345 ರನ್‌ಗಳಿಗೆ ಆಲೌಟಾಗಿದೆ. ಆರಂಭಿಕ ದಾಂಡಿಗ ಲೋಕೇಶ್ ರಾಹುಲ್ 149 ರನ್(224ಎ, 20ಬೌ,1ಸಿ) ಮತ್ತು ರಿಷಭ್ ಪಂತ್ 114ರನ್(146ಎ, 15ಬೌ,4ಸಿ) ಗಳಿಸಿ ಹೋರಾಟ ನಡೆಸಿದರೂ ತಂಡ ಗೆಲುವಿನ ದಡ ಸೇರಲಿಲ್ಲ.

3 ವಿಕೇಟ್ ಕಳೆದುಕೊಂಡು ಕೊನೆಯ ದಿನದಾಟ ಆರಂಭಿಸಿದ ಭಾರತದ ಆಟಗಾರರು ಆಂಗ್ಲರು ಒಡ್ಡಿದ 464 ರನ್ನುಗಳಿಗೆ ಉತ್ತರವಾಗಿ 2ನೇ ಇನ್ನಿಂಗ್ಸ್ ನಲ್ಲಿ 121 ರನ್ನುಗಳಿಗೆ 5 ವಿಕೇಟ್ ಕಳೆದುಕೊಂಡರೂ ರಾಹುಲ್ ಹಾಗೂ ರಿಶಬ್ ಪಂಥ್ ಅವರ 204 ರನ್ನುಗಳ ಅದ್ಭುತ ಜೊತೆಯಾಟ ಗೆಲುವಿನ ಹತ್ತಿರಕ್ಕೆ ಕರೆದುಕೊಂಡು ಬಂದಿತ್ತು. ಆದರೆ ಇವರಿಬ್ಬರು ವಿಕೇಟ್ ಒಪ್ಪಿಸಿದ ತಕ್ಷಣ ಉಳಿದ ಬಾಲಂಗೋಚಿಗಳು 34 ರನ್ನುಗಳ ಅಂತರದಲ್ಲಿ ಪೆವಿಲಿಯನ್ ಗೆ ತೆರಳಿದರು.

ಇಂಗ್ಲೆಂಡ್ ಪರ ಆಯಂಡರ್ ಸನ್ 45/3, ಕುರ್ರೆನ್, ರಶೀದ್ ತಲಾ 2 ವಿಕೇಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ವಿದಾಯ ಪಂದ್ಯದಲ್ಲಿ ಶತಕ ಗಳಿಸಿದ ಅಲಿಸ್ಟ್ ರ್ ಕುಕ್ ಪಂದ್ಯ ಶ್ರೇಷ್ಠ ಪುರಸ್ಕೃತರಾದರೆ, ಸರಣಿಯಲ್ಲಿ 593 ರನ್ ಗಳಿಸಿದ ವಿರಾಟ್ ಕೊಹ್ಲಿ ಹಾಗೂ 11 ವಿಕೇಟ್, 272 ರನ್ ಗಳಿದ ಸ್ಯಾಮ್ ಕುರ್ರೆನ್ ಜಂಟಿಯಾಗಿ ಸರಣಿ ಶ್ರೇಷ್ಠ ಪ್ರಶಸ್ತಿ ಹಂಚಿಕೊಂಡರು.

# ಸಂಕ್ಷಿಪ್ತ ಸ್ಕೋರ್ :
ಇಂಗ್ಲೆಂಡ್ 332 ಹಾಗೂ 423/8 ಡಿಕ್ಲೇರ್ಡ್
ಭಾರತ 292 ಹಾಗೂ 345/10

Facebook Comments

Sri Raghav

Admin