ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ 1ರೂ. ಇಳಿಸಿದ ದೀದಿ

ಈ ಸುದ್ದಿಯನ್ನು ಶೇರ್ ಮಾಡಿ

Petrol-Price

ಕಲ್ಕತ್ತಾ. ಸೆ.11 ಕೇಂದ್ರ ಸರ್ಕಾರ ತೈಲ ಬೆಲೆ ಇಳಿಸುವುದಿಲ್ಲ ಅಂತ ಖಾತರಿಯಾದ ನಂತರ ರಾಜ್ಯಗಳೇ ತೈಲ ಬೆಲೆ ಇಳಿಕೆಗೆ ಮುಂದಾಗಿವೆ. ಇಂದು ಪಶ್ಚಿಮ ಬಂಗಾಳ ರಾಜ್ಯವು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು 1 ರೂ ಕಡಿಮೆ ಮಾಡಿದೆ.

ದೇಶ್ಯಾದ್ಯಂತ ತೈಲ ಬೆಲೆ ದಿನದಿಂದ ದಿನಕ್ಕೆ ಗಗನದ ಹಾದಿಯಲ್ಲೇ ಸಾಗುತ್ತಿದೆ.. ಇದು ಜಾಗತಿಕ ಮಾರುಕಟ್ಟೆಯ ಏರಿಳಿತವಾಗಿದ್ದು , ಸದ್ಯ ಕೇಂದ್ರ ಸರ್ಕಾರ ಕಡಿಮೆ ಮಾಡುವ ಯೋಚನೆಯಲ್ಲಿಲ್ಲ, ತೈಲ ಬೆಲೆ ಏರಿಕೆ ವಿರೋಧಿಸಿ ಭಾನುವಾರವಷ್ಟೆ ವಿಪಕ್ಷಗಳಿಂದ ಭಾರತ್ ಬಂದ್ ಮಾಡಲಾಗಿದೆ. ಇದರ ನಡುವೆಯೇ ಕೇಳಿ ಬಂದ ಕೂಗು ಬೆಲೆ ಏರಿಕೆಯ ಲಾಭವನ್ನು ಕೇಂದ್ರಕ್ಕಿಂತ ರಾಜ್ಯಗಳೇ ಹೆಚ್ಚು ಪಡೆಯುತ್ತಿವೆ. ಆದಕಾರಣ ರಾಜ್ಯ ಸರ್ಕಾರಗಳೇ ಪೆಟ್ರೋಲ್ ಮತ್ತು ಡೀಸೆಲ್ ಬೆಳೆಯನ್ನು ಕಿಡಿತಗೊಳಿಸಬೇಕು ಎಂಬುದು.

ಸೋಮವಾರದ ಬಂದ್ ಗೂ ಒಂದು ದಿನ ಮುನ್ನವೇ ರಾಜಸ್ತಾನ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 2 .50 ರೂ ಇಳಿಕೆ ಮಾಡಿ ಬಂದ್ ಮಾಡುವವರಿಗೆ ಶಾಕ್ ನೀಡಿತ್ತು, ಇನ್ನು ಬಂದ್ ದಿನ ಆಂಧ್ರಪ್ರದೇಶ ಸರ್ಕಾರ ಕೂಡ ತಲಾ 2 ರೂ ದರ ಕಡಿತಗೊಳಿಸಿತು. ರಾಜ್ಯ ಸರ್ಕಾರವು ಬೆಲೆ ಕಡಿಮೆ ಮಾಡುವ ಬಗ್ಗೆ ಚರ್ಚಿಸುತ್ತಿದೆ. ಈಗ ಪಶ್ಚಿಮ ಬಂಗಾಳ ರಾಜ್ಯದ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಕೂಡ 1 ರೂ ನಷ್ಟು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಸಿದ್ದಾರೆ. ಇನ್ನು ಯಾವ. ರಾಜ್ಯ ತೈಲ ಬೆಲೆ ಇಳಿಸಲಿದೆ ಎಂಬುದನ್ನು ಕಾದುನೋಡಬೇಕು..

Facebook Comments

Sri Raghav

Admin