ಮತ್ತೊಮ್ಮೆ ಮುಖಾಮುಖಿಯಾಗಲಿದ್ದಾರೆ ಟ್ರಂಪ್-ಕಿಮ್

ಈ ಸುದ್ದಿಯನ್ನು ಶೇರ್ ಮಾಡಿ

Trump-And-Kim

ವಾಷಿಂಗ್ಟನ್, ಸೆ.11 (ಪಿಟಿಐ)-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ -ಉನ್ ನಡುವೆ ಎರಡನೇ ಸುತ್ತಿನ ಮಹತ್ವದ ಸಭೆಗೆ ವೇದಿಕೆ ಸಜ್ಜಾಗುತ್ತಿದೆ. ಈ ಸಂಬಂಧ ಶ್ವೇತಭವನ, ಉತ್ತರ ಕೊರಿಯಾದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಚರ್ಚೆ ನಡೆಸುತ್ತಿದ್ದಾರೆ.

ಉತ್ತರ ಕೊರಿಯಾ ನಾಯಕ ಕಿಮ್ ಅಮೆರಿಕ ಅಧ್ಯಕ್ಷರಿಗೆ ಸೌಹಾರ್ದ ಪತ್ರವೊಂದನ್ನು ರವಾನಿಸಿದ ನಂತರ ಈ ಇಬ್ಬರು ನಾಯಕರ ನಡುವೆ ಎರಡನೇ ಬಾರಿ ಸಭೆ ನಡೆಯುವ ಬೆಳವಣಿಗೆ ಕಂಡುಬಂದಿದೆ.   ಕಿಮ್ ಅವರು ಅಧ್ಯಕ್ಷರಿಗೆ ಪತ್ರವೊಂದನ್ನು ಬರೆದಿದ್ದಾರೆ. ಅದು ತುಂಬಾ ಸೌಹಾರ್ದಯುತ, ಪೂರಕ ಮತ್ತು ಸಕರಾತ್ಮವಾಗಿದೆ. ಪತ್ರದ ಪೂರ್ಣ ಒಕ್ಕಣೆಯನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಇದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ಹೇಳಿದ್ದಾರೆ.

ಕಳೆದ ಜೂನ್‍ನಲ್ಲಿ ಟ್ರಂಪ್ ಮತ್ತು ಕಿಮ್ ನಡುವೆ ಸಿಂಗಪುರ್‍ನಲ್ಲಿ ನಡೆದ ಮೊದಲ ಸಭೆ ಯಶಸ್ವಿಯಾಗಿತ್ತು. ಅದಾದ ನಂತರ ಉತ್ತರ ಕೊರಿಯಾ ತನ್ನ ಹಠಮಾರಿತನವನ್ನು ಬದಿಗಿಟ್ಟು, ತನ್ನಲ್ಲಿದ್ದ ವಿನಾಶಕಾರಿ ಅಣ್ವಸ್ತ್ರಗಳನ್ನು ನಾಶ ಮಾಡಿ ಸದ್ಭಾವ ಧೋರಣೆ ಪ್ರದರ್ಶಿಸಿತ್ತು.

Facebook Comments

Sri Raghav

Admin