ಬರ್ತ್ ಡೇ ಕೇಕ್ ಕತ್ತರಿಸುವಾಗ ತಲ್ವಾರ್ ಪ್ರದರ್ಶಿಸಿ ಪೇಚಿಗೆ ಸಿಲುಕಿದ ರೌಡಿಶೀಟರ್

ಈ ಸುದ್ದಿಯನ್ನು ಶೇರ್ ಮಾಡಿ

Talwan-Birthday
ವಿಜಯಪುರ, ಸೆ.12-ಹುಟ್ಟುಹಬ್ಬದ ಆಚರಣೆ ವೇಳೆ ಬಹಿರಂಗವಾಗಿ ತಲ್ವಾರ್ ಪ್ರದರ್ಶನ ಮಾಡಿ ರೌಡಿಶೀಟರ್‍ವೊಬ್ಬ ಇಕ್ಕಟ್ಟಿಗೆ ಸಿಲುಕಿರುವ ಪ್ರಕರಣ ವಿಜಯಪುರದಲ್ಲಿ ನಡೆದಿದೆ. ತನ್ವೀರ್ ಶಾನವಾಲೆ ಅವರು ಹುಟ್ಟುಹಬ್ಬ ಆಚರಣೆ ವೇಳೆ ಕೇಕ್ ಕತ್ತರಿಸುವ ಪಕ್ಕದಲ್ಲೇ ತಲ್ವಾರ್ ಇಟ್ಟುಕೊಂಡು ತಮ್ಮ ಹಳೇ ಚಾಳಿ ಮುಂದುವರೆಸಿದ್ದು, ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದೆ.

ಇತ್ತೀಚೆಗೆ ತನ್ವೀರ್ ಶಾನವಾಲೆಗೆ ರೌಡಿಗಳ ಪರೇಡ್ ವೇಳೆ ಐಜಿಪಿ ಅಲೋಕ್‍ಕುಮಾರ್ ಇನ್ನಾದರೂ ಶಿಸ್ತಿನಿಂದ ಇರುವಂತೆ ಕಠಿಣ ಎಚ್ಚರಿಕೆ ನೀಡಿದ್ದರು. ಆದರೂ ತನ್ವೀರ್ ಮಾತ್ರ ತನ್ನ ಚಾಳಿಯನ್ನೆ ಮುಂದುವರೆಸಿದ್ದು, ಪೊಲೀಸ್ ಇಲಾಖೆಗೆ ಸವಾಲೆಸೆದಂತಾಗಿದೆ. ಪೊಲೀಸರು ಮುಂದೆ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಸಾರ್ವಜನಿಕರು ಕುತೂಹಲದಿಂದ ಕಾದು ನೋಡುತ್ತಿದ್ದಾರೆ.

Facebook Comments

Sri Raghav

Admin