ವಂಚಿಸಿದ 3,250 ಕೋಟಿ ರೂ. ಹಣವನ್ನು ಚೋಕ್ಸಿ ವರ್ಗಾಯಿಸಿದ್ದು ಎಲ್ಲಿಗೆ..?

ಈ ಸುದ್ದಿಯನ್ನು ಶೇರ್ ಮಾಡಿ

PNB-Bank-Choksi
ನವದೆಹಲಿ, ಸೆ.12 (ಪಿಟಿಐ)-ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ(ಪಿಎನ್‍ಬಿ) 13,000 ಕೋಟಿ ರೂ. ವಂಚಿಸಿ ಅಂಟಿಗುವಾ ದ್ವೀಪರಾಷ್ಟ್ರದಲ್ಲಿ ಆಶ್ರಯ ಪಡೆದಿರುವ ಕಳಂಕಿತ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ ಮತ್ತೊಂದು ಅಕ್ರಮ ವಹಿವಾಟು ಬೆಳಕಿಗೆ ಬಂದಿದೆ. ಪಿಎನ್‍ಬಿ ಬ್ಯಾಂಕಿಗೆ ವಂಚಿಸಿದ ಹಣದಲ್ಲಿ 3,250 ಕೋಟಿ ರೂ.ಗಳನ್ನು ಚೋಕ್ಸಿ ವಿದೇಶದಲ್ಲಿ ಹೂಡಿಕೆ ಮಾಡಿರುವುದನ್ನು ಜಾರಿ ನಿರ್ದೇಶನಾಲಯ(ಇಡಿ) ಪತ್ತೆ ಮಾಡಿದೆ.

ವಂಚನೆಯ ಹಣವನ್ನು ಅಮೆರಿಕ, ಥೈಲೆಂಡ್, ಬೆಲ್ಜಿಯಂ, ಯುಎಇ, ಇಟಲಿ, ಜಪಾನ್ ಮತ್ತು ಹಾಂಕಾಂಗ್‍ನಲ್ಲಿರುವ ಬೇನಾಮಿ ಮತ್ತು ನಕಲಿ ಕಂಪನಿಗಳಿಗೆ ಮೆಹುಲ್ ಚೋಕ್ಸಿ ವರ್ಗಾವಣೆ ಮಾಡಿದ್ದಾನೆ ಎಂದು ಇಡಿ ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.

ಚೋಕ್ಸಿ ವೈಯಕ್ತಿಕವಾಗಿ ಹಣ ದುರ್ಬಳಕೆ ಮತ್ತು ವರ್ಗಾವಣೆಗಾಗಿ ನಕಲಿ ಕಂಪನಿಗಳ ಹೆಸರುಗಳನ್ನು ಬಳಸುತ್ತಿದ್ದರು. ಈ ಕಂಪನಿಗಳ ಹೆಸರಿನಲ್ಲಿ ಮಾರಾಟ ಮತ್ತು ಖರೀದಿ ಬಿಲ್‍ಗಳನ್ನು ಸೃಷ್ಟಿಸಲಾಗುತ್ತಿತ್ತು. ಆದರೆ ವಾಸ್ತವವಾಗಿ ಯಾವುದೇ ಉತ್ಪನ್ನಗಳ ಮಾರಾಟ ಅಥವಾ ಖರೀದಿ ವ್ಯವಹಾರ ನಡೆಯುತ್ತಿರಲಿಲ್ಲ. ಬ್ಯಾಂಕಿನಿಂದ ಹೆಚ್ಚಿನ ಸಾಲ ಸೌಲಭ್ಯಗಳನ್ನು ಪಡೆಯಲು ಚೋಕ್ಸಿ ಈ ರೀತಿ ಕುತಂತ್ರಗಳನ್ನು ಅನುಸರಿಸುತ್ತಿದ್ದ ಎಂದು ಜಾರಿ ನಿರ್ದೇಶನಾಲಯ ಆಪಾದಿಸಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕಿನಿಂದ ಪಡೆದ 13,000 ಕೋಟಿ ರೂ.ಗಳ ಸಾಲದ ಹಣದಲ್ಲಿ ಚೋಕ್ಸಿ ತನ್ನ ಸಂಬಂಧಿ ಮತ್ತು ಮತ್ತೊಬ್ಬ ಡೈಮಂಡ್ ಡೀಲರ್ ನೀರವ್ ಮೋದಿಗೆ 400 ಕೋಟಿ ರೂ.ಗಳು ಹಾಗೂ ಮೋದಿ ತಂದೆ ದೀಪಕ್ ಮೋದಿಗೆ 380 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿದ್ದಾರೆ ಎಂದು ಇಡಿ ದಾಖಲಿಸಿರುವ ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.

Facebook Comments

Sri Raghav

Admin