ಮಣ್ಣಿನ ಗೌರಿ-ಗಣೇಶ ಬಳಸಲು ಮುಖ್ಯಮಂತ್ರಿ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy

ಬೆಂಗಳೂರು, ಸೆ.12- ಪರಿಸರ ಸ್ನೇಹಿಯಾದ ಮಣ್ಣಿನ ಗೌರಿ-ಗಣೇಶ ಮೂರ್ತಿಗಳನ್ನು ನಾಡಿನ ಜನರು ತಮ್ಮ ಮನೆಗಳಲ್ಲಿ ಪೂಜಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ನಾಡಿನ ಸಮಸ್ತ ಜನತೆಗೆ ಗೌರಿ -ಗಣೇಶ ಹಬ್ಬದ ಶುಭಾಷಯ ಕೋರಿರುವ ಅವರು, ಪರಿಸರಕ್ಕೆ ಮಾರಕವಾಗಿರುವ ಪಿಒಪಿ ಗೌರಿ ಗಣೇಶ ಮೂರ್ತಿಗಳನ್ನು ಪೂಜಿಸಬಾರದು. ಮನೆಯಲ್ಲಿ ಪೂಜಿಸುವ ಗೌರಿ-ಗಣೇಶ ಮೂರ್ತಿಗಳನ್ನು ಕೆರೆಗಳಲ್ಲಿ ವಿಸರ್ಜಿಸದೆ ತಮ್ಮ ಮನೆಯ ಬಕೆಟ್‍ಗಳಲ್ಲೇ ವಿಸರ್ಜಿಸಿ ಆ ನೀರನ್ನು ಮನೆಯ ಆವರಣದಲ್ಲಿರುವ ಗಿಡಗಳಿಗೆ ಬಳಸುವಂತೆ ಸಲಹೆ ಮಾಡಿದ್ದಾರೆ. ಆ ಮೂಲಕ ಪರಿಸರ ಮಾಲಿನ್ಯ ತಡೆಗಟ್ಟಲು ಸಾರ್ವಜನಿಕರು ಸಹಕರಿಸಬೇಕು ಎಂದಿದ್ದಾರೆ. ವಿಘ್ನ ನಿವಾರಕನು ಎಲ್ಲರಿಗೂ ಸುಖ ಸಮೃದ್ಧಿಯನ್ನು ದಯಪಾಲಿಸಲಿ ಎಂದು ಅವರು ಶುಭ ಹಾರೈಸಿದ್ದಾರೆ.

Facebook Comments

Sri Raghav

Admin