ಪ್ರಥಮ 2+2 ಮಾತುಕತೆ ಯಶಸ್ಸು : ಭಾರತ-ಅಮೆರಿಕ ಸಂಬಂಧದಕ್ಕೆ ಹೊಸ ವ್ಯಾಖ್ಯಾನ

ಈ ಸುದ್ದಿಯನ್ನು ಶೇರ್ ಮಾಡಿ

Sushma-swaraj-01

ವಾಷಿಂಗ್ಟನ್, ಸೆ.12 (ಪಿಟಿಐ)- ಭಾರತ ಮತ್ತು ಅಮೆರಿಕ ನಡುವೆ ನಡೆದ ಪ್ರಥಮ 2+2 ಮಾತುಕತೆ ಅದ್ಭುತ ಯಶಸ್ಸು ಎಂದು ಬಣ್ಣಿಸಿರುವ ಅಮೆರಿಕ ರಕ್ಷಣಾ ಸಚಿವ ಜೇಮ್ಸ್ ಮಟ್ಟೀಸ್, ಇದು ಉಭಯ ದೇಶಗಳ ನಡುವಣ ಸಂಬಂಧದ ಹೊಸ ವ್ಯಾಖ್ಯಾನ ಎಂದು ಹೇಳಿದ್ದಾರೆ.  ಅಮೆರಿಕದ ರಕ್ಷಣಾ ಇಲಾಖೆ-ಪೆಂಟಗನ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಮತ್ತು ಅಮೆರಿಕದ ರಕ್ಷಣಾ ಸಹಕಾರ ಸರಿಯಾದ ದಾರಿಯಲ್ಲಿದೆ ಎಂದು ತಿಳಿಸಿದರು.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಸೆಪ್ಟೆಂಬರ್ 6ರಂದು ದೆಹಲಿಯಲ್ಲಿ ತಮ್ಮ ಸಹವರ್ತಿಗಳಾದ ಮಟ್ಟಿಸ್ ಮತ್ತು ಮೈಕ್ ಪೊಂಪಿಯೋ ಅವರೊಂದಿಗೆ 2+2 ಮಾತುಕತೆ ನಡೆಸಿದ್ದರು.  ಕಳೆದ ವಾರ ನಾನು ಭಾರತಕ್ಕೆ ಹೋಗಿದ್ದೆ. ವಿಶ್ವದ ಎರಡು ಬೃಹತ್ ಪ್ರಜಾಪ್ರಭುತ್ವ ದೇಶಗಳ ನಡುವೆ ನಡೆದ ಮಾತುಕತೆ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ. ಭದ್ರತೆ ಮತ್ತು ರಕ್ಷಣೆಗೆ ಸಂಬಂಧಿಸಿದಂತೆ ಎರಡು ದೇಶಗಳು ಮತ್ತಷ್ಟು ಹತ್ತಿರವಾಗಲು ಅನೇಕ ಮಹತ್ವದ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ. ಇದೊಂದು ಐತಿಹಾಸಿಕ ಮತ್ತು ಯಶಸ್ಸಿನ ಪ್ರವಾಸ ಎಂದು ಮಟ್ಟೀಸ್ ಹೇಳಿದರು.

Facebook Comments

Sri Raghav

Admin