ಹೆಲಿಕಾಪ್ಟರ್ ಖರೀದಿ ಹಗರಣ : ಮಾಜಿ ಐಎಎಫ್ ಮುಖ್ಯಸ್ಥ ತ್ಯಾಗಿಗೆ ಜಾಮೀನು

ಈ ಸುದ್ದಿಯನ್ನು ಶೇರ್ ಮಾಡಿ

Tyagi-01

ನವದೆಹಲಿ, ಸೆ.12 (ಪಿಟಿಐ)- ಅಗಸ್ಟಾವೆಸ್ಟ್‍ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣ ಪ್ರಕರಣದಲ್ಲಿ ಭಾರತೀಯ ವಾಯುಪಡೆ ಮಾಜಿ ಮುಖ್ಯಸ್ಥ ಎಸ್.ಪಿ.ತ್ಯಾಗಿ ಮತ್ತಿತರರಿಗೆ ದೆಹಲಿಯ ನ್ಯಾಯಾಲಯವೊಂದು ಇಂದು ಜಾಮೀನು ಮಂಜೂರು ಮಾಡಿದೆ.  ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಹಣ ದುರ್ಬಳಕೆ ಪ್ರಕರಣದ ಆರೋಪಿಗಳಾಗಿರುವ ತ್ಯಾಗಿ ಮತ್ತು ಅವರ ಸಂಬಂಧಿಕರಿಗೆ ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್ ಒಂದು ಲಕ್ಷ ರೂ.ಗಳ ಜಾಮೀನು ಬಾಂಡ್ ಹಾಗೂ ಅಷ್ಟೇ ಮೊತ್ತದ ಶೂರಿಟಿ ಮೇಲೆ ಜಾಮೀನು ಮಂಜೂರು ಮಾಡಿದರು.

ಈ ಪ್ರಕರಣದ ಸಂಬಂಧ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಲಾಗಿತ್ತು. ಅದರಂತೆ ಆರೋಪಿಗಳು ಕೋರ್ಟ್‍ಗೆ ಹಾಜರಾಗಿದ್ದರು. ಆಗಸ್ಟಾವೆಸ್ಟ್‍ಲ್ಯಾಂಡ್ ಅಂಡ್ ಫಿನ್‍ಮೆಕ್ಕಾನಿಕಾ ನಿರ್ದೇಶಕರಾದ ಗ್ರುಸೆಪ್ಪ್ ಒರ್ಸಿ ಮತ್ತು ಬ್ರುನೋ ಸ್ಪಾಗ್‍ನೊಲಿನಿ, ತ್ಯಾಗಿ ಹಾಗೂ ಇತರರಿಗೆ ಜುಲೈ 24ರಂದು ಕೋರ್ಟ್ ಸಮನ್ಸ್ ಜಾರಿಗೊಳಿಸಿ ಇಂದು ಹಾಜರಾಗುವಂತೆ ಸೂಚಿಸಿತ್ತು. ಅಲ್ಲದೆ ಈ ಪ್ರಕರಣದಲ್ಲಿ ಇಟಲಿಯ ಮಧ್ಯವರ್ತಿ ಕಾರ್ಲೊ ಗೆರೋಸಾ ಮತ್ತು ಗುಡೋ ಹಾಶ್‍ಕೆ ಹಾಗೂ ದುಬೈ ಮೂಲದ ಉದ್ಯಮಿ ರಾಜೀವ್ ಸಕ್ಸೇನಾ ಅವರಿಗೆ ಜಾಮೀನುರಹಿತ ವಾರೆಂಟ್‍ಗಳನ್ನು ಸಹ ಹೊರಡಿಸಿತ್ತು.

Facebook Comments

Sri Raghav

Admin