ಪತ್ನಿ ಕಲ್ಸೂಮ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಷರೀಫ್’ಗೆ 12 ಗಂಟೆ ಪೆರೋಲ್

ಈ ಸುದ್ದಿಯನ್ನು ಶೇರ್ ಮಾಡಿ

Parol-01

ಲಾಹೋರ್, ಸೆ.12-ಕ್ಯಾನ್ಸರ್ ರೋಗದಿಂದ ಮೃತಪಟ್ಟ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್‍ರ ಪತ್ನಿ ಬೇಗಂ ಕಲ್ಸೂಮ್ ನವಾಜ್(68)ಅಂತ್ಯಕ್ರಿಯೆಗೆ ಸಿದ್ಧತೆಗಳು ನಡೆಯುತ್ತಿವೆ. ಅಕ್ರಮ ಆಸ್ತಿ ಮತ್ತು ಹಣ ದುರ್ಬಳಕೆ ಪ್ರಕರಣದಲ್ಲಿ ರಾವಲ್ಪಿಂಡಿಯಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ನವಾಜ್ ಷರೀಫ್, ಪುತ್ರಿ ಮರ್ಯಮ್ ಹಾಗೂ ಅಳಿಯ ಮಹಮದ್ ಸಫ್ದರ್ ಅವರಿಗೆ ಕಲ್ಸೂಮ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅಡಿಯಾಲಾ ಜೈಲಿನ ಉನ್ನತಾಧಿಕಾರಿಗಳು 12 ತಾಸುಗಳ ಪೆರೋಲ್ ನೀಡಿದ್ದಾರೆ.

ಪೆರೋಲ್ ದೊರೆತ ನಂತರ ನವಾಜ್, ಪುತ್ರಿ ಮತ್ತು ಅಳಿಯ ರಾವಲ್ಪಿಂಡಿಯಿಂದ ಲಾಹೋರ್‍ಗೆ ವಿಶೇಷ ವಿಮಾನದಲ್ಲಿ ಇಂದು ಮುಂಜÁನೆ ಬಿಗಿ ಭದ್ರತೆಯೊಂದಿಗೆ ತೆರಳಿದರು. ಲಂಡನ್‍ನಿಂದ ಬಂದ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಇಂದು ಅಪರಾಹ್ನದ ನಂತರ ನಡೆಯಲಿರುವ ಅಂತ್ಯಕ್ರಿಯೆಯಲ್ಲಿ ಇವರು ಪಾಲ್ಗೊಳ್ಳುವರು.

ದೀರ್ಘ ಕಾಲದಿಂದ ಕಾನ್ಸರ್‍ನೊಂದಿಗೆ ಹೋರಾಡಿದ ಕಲ್ಸೂಮ್ ನಿನ್ನೆ ರಾತ್ರಿ ಲಂಡನ್‍ನಲ್ಲಿ ನಿಧನರಾದರು ಅವರ ಮೃತದೇಹವನ್ನು ಲಂಡನ್‍ನಿಂದ ಲಾಹೋರ್‍ಗೆ ತರಲಾಗಿದ್ದು, ಷರೀಫ್ ಕುಟುಂಬದ ಜಟಿ ಉಮ್ರಾ ಲಾಹೋರ್ ನಿವಾಸದಲ್ಲಿ ಸಮಾಧಿ ಮಾಡಲಾಗುತ್ತದೆ.

Facebook Comments

Sri Raghav

Admin