ಶಾಕಿಂಗ್ ಸುದ್ದಿ : 90ರೂ. ದಾಟಿದ ಪೆಟ್ರೋಲ್ ದರ..!

ಈ ಸುದ್ದಿಯನ್ನು ಶೇರ್ ಮಾಡಿ

Petrol-and-diesel
ಮುಂಬೈ, ಸೆ.12 (ಪಿಟಿಐ)- ಗಗನಕ್ಕೇರುತ್ತಿರುವ ಇಂಧನ ದರವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಮತ್ತು ಹಲವಾರು ವಿರೋಧ ಪಕ್ಷಗಳು ಭಾರತ್ ಬಂದ್ ನಡೆಸಿದ್ದರೂ, ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಹೆಚ್ಚಾಗುತ್ತಲೇ ಇದೆ.

ಬಹುತೇಕ ಕಳೆದ ಒಂದು ತಿಂಗಳಿನಿಂದ ದಿನನಿತ್ಯ ಏರುತ್ತಲೇ ಇರುವ ಪೆಟ್ರೋಲ್ ಬೆಲೆ ಮಹಾರಾಷ್ಟ್ರದ ಪರ್ಭಣಿಯಲ್ಲಿ ನಿನ್ನೆಯಿಂದ ದೇಶದಲ್ಲೇ ಅತ್ಯಂತ ಗರಿಷ್ಠ ಮಟ್ಟ ತಲುಪಿದೆ. ಅಲ್ಲಿ ಪ್ರತಿ ಲೀಟರ್ ಪೆಟ್ರೋಲ್ 90 ರೂ.ಗಳನ್ನು ದಾಟಿದೆ. ನಿನ್ನೆ ಅಲ್ಲಿ ಒಂದು ಲೀಟರ್‍ಗೆ 89.90 ರೂ. ಇತ್ತು. ಇಂದು ಬೆಳಗ್ಗೆ 90 ರೂ.ಗಳನ್ನು ತಲುಪಿದೆ. ಇದು ಅತಿ ಗರಿಷ್ಠ ಮಟ್ಟದ ಏರಿಕೆಯಾಗಿದೆ. ಡಿಸೇಲ್ ಬೆಲೆ ಕೂಡ ಪ್ರತಿ ಲೀಟರ್‍ಗೆ 80 ರೂ.ಗಳ ಆಸುಪಾಸಿನಲ್ಲಿದೆ.  ದೇಶದ ಮಹಾನಗರಗಳಾದ ಮುಂಬೈ, ದೆಹಲಿ, ಕೊಲ್ಕತ್ತಾ ಮತ್ತು ಚೆನ್ನೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆ ಕಂಡುಬಂದಿದೆ. ವಿವಿಧ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ವಿವರ ಹೀಗಿದೆ.

Petrol--011

# ಕೇಂದ್ರ ರಸ್ತೆ ಸಾರಿಗೆ ಸಚಿವ ಗಡ್ಕರಿ ಕೊಟ್ಟ ಸಲಹೆ ಏನು ಗೊತ್ತೇ .?

”ದೇಶದಲ್ಲಿನ ಇಥೆನಾಲ್‌ ಘಟಕಗಳು ಗರಿಷ್ಠ ಉತ್ಪಾದನೆ ಮಾಡಿದಲ್ಲಿ ಮತ್ತು ಪರ್ಯಾಯ ಇಂಧನಗಳು ಗರಿಷ್ಠ ಪ್ರಮಾಣದಲ್ಲಿ ಬಳಕೆಯಾದಲ್ಲಿ ಲೀಟರ್‌ ಡೀಸೆಲ್‌ ಬೆಲೆ 50 ರೂ.ಗೆ ಮತ್ತು ಲೀಟರ್‌ ಪೆಟ್ರೋಲ್‌ ಬೆಲೆ 55 ರೂ. ಗೆ ಇಳಿಯಲು ಸಾಧ್ಯ” ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ದೇಶದಲ್ಲಿ ಪರ್ಯಾಯ ಇಂಧನಗಳಾದ ಇಥೆನಾಲ್‌, ಮಿಥೆನಾಲ್‌, ಬಯೋ ಫ್ಯೂಯೆಲ್‌ ಮತ್ತು ಸಿಎನ್‌ಜಿ ಗರಿಷ್ಠ ಪ್ರಮಾಣದಲ್ಲಿ ಬಳಕೆಯಾದಲ್ಲಿ ಪೆಟ್ರೋಲಿಯಂ ಮೇಲಿನ ಅವಲಂಬನೆ ಕಡಿಮೆಯಾಗಿ ಪೆಟ್ರೋಲ್‌, ಡೀಸೆಲ್‌ ದರಗಳು ಇಳಿಯಲು ಸಾಧ್ಯವಿದೆ ಎಂದು ಗಡ್ಕರಿ ಹೇಳಿದರು.

Facebook Comments

Sri Raghav

Admin