ಗುಂಡಿಟ್ಟು ಹೆಡ್ ಕಾನ್ಸ್ಟೆಬಲ್ ನನ್ನು ಕೊಂದ ದುಷ್ಕರ್ಮಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Polcie-Hdadc

ನವದೆಹಲಿ, ಸೆ.12 (ಪಿಟಿಐ)- ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಪೊಲೀಸ್ ಮುಖ್ಯ ಪೇದೆಯೊಬ್ಬರನ್ನು ಕೊಂದಿರುವ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ.  ರಾಮ್ ಅವತಾರ್ ಹತ್ಯೆಗೀಡಾದ ಪೊಲೀಸ್ ಹೆಡ್ ಕಾನ್ಸ್‍ಟೆಬಲ್. ಇವರ ದೆಹಲಿಯ ಅಂಬೇಡ್ಕರ್ ನಗರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.  ನಿನ್ನೆ ರಾತ್ರಿ ಈ ಹತ್ಯೆ ನಡೆದಿದೆ. ವಾಯುವ್ಯ ದೆಹಲಿಯ ಜೈತ್‍ಪುರ್ ಪ್ರದೇಶದಲ್ಲಿನ ತಮ್ಮ ಮನೆಯಿಂದ ಹತ್ತಿರದ ಅಂಗಡಿಗೆ ರಾಮ್ ಅವತಾರ್ ಹೋಗುತ್ತಿದ್ದಾಗ ದುಷ್ಕರ್ಮಿಗಳು ಅವರನ್ನು ಗುಂಡಿಟ್ಟು ಕೊಂದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಮ್ ಅವತಾರ್ ಅವರು ನಿನ್ನೆ ರಾತ್ರಿ 8 ಗಂಟೆಗೆ ಕರ್ತವ್ಯ ಮುಗಿಸಿ ಮನೆಗೆ ಹಿಂದಿರುಗಿದ್ದರು. 10.30 ರಿಂದ 10.45ರ ನಡುವೆ ಹಂತಕರಿಂದ ಈ ಕೃತ್ಯ ನಡೆದಿದೆ ಎಂದು ಅವರು ಹೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ. ಹಂತಕರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.

Facebook Comments

Sri Raghav

Admin