ಪೆಟ್ರೋ-ಕೆಮಿಕಲ್ ಕಾರ್ಖಾನೆಯಲ್ಲಿ ಸ್ಫೋಟ : ಆರು ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Blast--11

ಬಿಜ್ನೋರ್(ಉ.ಪ್ರ.), ಸೆ.12 (ಪಿಟಿಐ)- ಉತ್ತರ ಪ್ರದೇಶದ ಬಿಜ್ನೋರ್‍ನ ರಾಸಾಯನಿಕ ಕಾರ್ಖಾನೆಯಲ್ಲಿ ಇಂದು ಬೆಳಗ್ಗೆ ಮೀಥೇನ್ ಅನಿಲ ಸಿಲಿಂಡರ್ ಸ್ಪೋಟಗೊಂಡು ಆರು ಮಂದಿ ಮೃತಪಟ್ಟು, ಹಲವರು ಗಾಯಗೊಂಡಿರುವ ಭೀಕರ ಘಟನೆ ಸಂಭವಿಸಿದೆ.  ಈ ದುರ್ಘಟನೆಯಲ್ಲಿ ಕೆಲವರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ. ಇಲ್ಲಿನ ನಾಗೀನಾ ರಸ್ತೆಯಲ್ಲಿರುವ ಮೋಹಿತ್ ಪೆಟ್ರೋ-ಕೆಮಿಕಲ್ಸ್ ಕಾರ್ಖಾನೆಯಲ್ಲಿ ಬೆಳಗ್ಗೆ 8 ಗಂಟೆಯಲ್ಲಿ ಈ ದುರ್ಘಟನೆ ನಡೆದಿದೆ. ಸಿಲಿಂಡರ್ ಸ್ಫೋಟದಿಂದ ಕಾರ್ಖಾನೆಯಲ್ಲಿ ಬೃಹತ್ ಪ್ರಮಾಣದ ಅಗ್ನಿ ಅನಾಹುತ ಸಂಭವಿಸಿದೆ.

ಈ ದುರಂತದಲ್ಲಿ ಬಾಲಗೋವಿಂದ್, ರವಿ, ಲೋಕೇಂದ್ರ, ಕಮಲ್‍ವೀರ್, ವಿಕ್ರಾಂತ್ ಮತ್ತು ಚೇತ್‍ರಾಮ್ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಒಂಭತ್ತು ಜನರಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಸೋರುತ್ತಿದ್ದ ಟ್ಯಾಂಕ್‍ನನ್ನು ಕಾರ್ಮಿಕರು ದುರಸ್ತಿಗೊಳಿಸಲು ವೆಲ್ಡಿಂಗ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಮೀಥೇನ್ ಅನಿಲ ಸಿಲಿಂಡರ್ ಸ್ಪೋಟಗೊಂಡು ಈ ಘೋರ ದುರಂತ ಸಂಭವಿಸಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

Facebook Comments

Sri Raghav

Admin