ಜಾರಕಿ ಹೊಳಿ ಸಹೋದರರು ನನ್ನ ಸಂಪರ್ಕದಲ್ಲಿಲ್ಲ, ಬಿಜೆಪಿಗೆ ಬಂದ್ರೆ ಸ್ವಾಗತ

ಈ ಸುದ್ದಿಯನ್ನು ಶೇರ್ ಮಾಡಿ

Prabhakar--01

ಬೆಳಗಾವಿ, ಸೆ. 12- ರಾಜಕೀಯವಾಗಿ ಜಾರಕಿಹೊಳಿ ಸಹೋದರರು ನನ್ನ ಸಂಪರ್ಕ ದಲ್ಲಿಲ್ಲ, ಒಂದು ವೇಳೆ ಅವರು ಬಿಜೆಪಿಗೆ ಬಂದರೆ ಸ್ವಾಗತಿಸುವುದಾಗಿ ರಾಜಸಭಾ ಸದಸ್ಯ ಪ್ರಭಾಕರ್ ಕೋರೆ ಅವರು ಇಂದಿಲ್ಲಿ ತಿಳಿಸಿದರು. ಅಖಿಲ ಭಾರತ ಕನ್ನಡ ಭವನ ಉದ್ಘಾಟನೆ ಕುರಿತಂತೆ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. 3.40 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಅಖಿಲ ಭಾರತ ಕನ್ನಡ ಭವನವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ, ಕಸಾಪ ಅಧ್ಯಕ್ಷ ಮನು ಬಳಿಗಾರ್ ಮತ್ತಿತರರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆಂದು ಅವರು ಹೇಳಿದರು. ಕಾಂಗ್ರೆಸ್ ಪಕ್ಷದಲ್ಲಿ ಮೂಲ ಕಾಂಗ್ರೆಸಿಗರು ಯಾರು ಇಲ್ಲ , ಹೀಗಾಗಿ ಆ ಪಕ್ಷದಲ್ಲಿ ವಲಸೆ ಸಂಸ್ಕøತಿ ಮುಂದುವರೆದಿದೆ ಎಂದರು.

Facebook Comments

Sri Raghav

Admin