ನೆನಪಿಡಿ ನಿಮ್ಮ ಉತ್ತಮ ಹವ್ಯಾಸಗಳೇ ನಿಮ್ಮ ವ್ಯಕ್ತಿತ್ವವನ್ನು ನಿರ್ಮಾಣ ಮಾಡುತ್ತವೆ

ಈ ಸುದ್ದಿಯನ್ನು ಶೇರ್ ಮಾಡಿ

arti-2
-ಸಂತೋಷ್‍ರಾವ್ ಪೆರ್ಮುಡ
ಅಸತೋಮಾ ಸದ್ಗಮಯ ಅಂದರೆ ಅಸತ್ಯದಿಂದ ಸತ್ಯದೆಡೆಗೆ, ತಮಸೋಮ ಜ್ಯೋತಿರ್ಗಮಯ ಅಂದರೆ ಕತ್ತಲೆಯಿಂದ ಬೆಳಕಿನೆಡೆಗೆ, ಮೃತ್ಯೋರ್ಮಾ ಅಮೃತಂಗ ಮಯ ಮೃತ್ಯುವಿನಿಂದ ಅಮರತ್ವದೆಡೆಗೆ ಎಂಬ ಮಾತಿನಂತೆ ಉತ್ತಮ ಹವ್ಯಾಸ ಎಂದರೆ ದೈನಂದಿನ ಜೀವನದಲ್ಲಿ ಉತ್ತಮ ಕೆಲಸ ಕಾರ್ಯಗಳ ಮೂಲಕ ಸದಾ ಚಟುವಟಿಕೆ ಮತ್ತು ಆರೋಗ್ಯಯುತವಾದ ಬದುಕನ್ನು ಸಾಗಿಸುವುದೇ ಆಗಿದೆ. ಧನಾತ್ಮಕಹವ್ಯಾಸಗಳು ಮನುಷ್ಯನನ್ನು ಸದಾ ಕಾಲ ಕ್ರಿಯಾ ಶೀಲನನ್ನಾಗಿಡುವುದಲ್ಲದೇ ವ್ಯಕ್ತಿತ್ವವನ್ನು ಗುರುತಿಸಲು ಸಹಕಾರಿಯೂ ಆಗಿದೆ.

ಒಳ್ಳೆಯ ಜೀವನಕ್ರಮ ಹಾಗೂ ಉತ್ತಮ ಹವ್ಯಾಸ ಇರುವವರಿಗೆ ಸಮಾಜದಲ್ಲಿ ಹೆಚ್ಚಿನ ಮನ್ನಣೆ ದೊರೆಯುವುದರೊಂದಿಗೆ ಅವರು ಸಮುದಾಯದಲ್ಲಿ ಒಂದಲ್ಲ ಒಂದು ಪ್ರಕಾರದಲ್ಲಿ ಗುರುತಿಸಿಕೊಳ್ಳುತ್ತಲ್ಲೇ ಇರುತ್ತಾರೆ. ಹವ್ಯಾಸಗಳು ಬಹುತೇಕ ಮನುಷ್ಯನ ಹುಟ್ಟಿನಿಂದಲೇ ಬರುವ ಅಂಶಗಳಾಗಿದ್ದು, ಪ್ರತಿಯೊಬ್ಬನೂ ತಾನು ಹುಟ್ಟಿಬೆಳೆಯುವ ಕುಟುಂಬ, ಅಲ್ಲಿನ ಪರಿಸರ, ಸಾರ್ವಜನಿಕರೊಂದಿಗಿನ ನಿರಂತರಸಂಪರ್ಕ, ಇತರರ ಸಂಗದಕಲಿಕೆಯ ಮುಖಾಂತರ ಹವ್ಯಾಸಗಳು ವ್ಯಕ್ತಿಯಲ್ಲಿ ಗಾಢವಾಗಿ ಬೇರೂರುತ್ತದೆ. ಇಂತಹ ಆರೋಗ್ಯಕರ ಅಭ್ಯಾಸಗಳ ಪೈಕಿ ಯಾವುದುವ್ಯಕ್ತಿಯ ದಿನನಿತ್ಯದ ಕೆಲಸಗಳ ಜೊತೆಯಲ್ಲಿ ಬದುಕಿನ ಒಂದು ಭಾಗವಾಗಿಬಿಡುತ್ತದೆಯೋ ಅವುಗಳನ್ನೇ ಹವ್ಯಾಸಗಳು ಎಂದು ಕರೆಯುತ್ತಾರೆ.

ಪ್ರತಿನಿತ್ಯ ಸೂರ್ಯೋದಯಕ್ಕೂ ಮುನ್ನ ಎದ್ದು ಪ್ರಾತಃರ್ವಿಧಿಗಳನ್ನು ಪೂರೈಸುವ ಮೂಲಕ ದಿನವನ್ನು ಧನಾತ್ಮಕವಾಗಿ ಪ್ರಾರಂಭಿಸುವಲ್ಲಿ ಮುನ್ನುಡಿ ಹಾಡುವುದು. ಬೆಳಗಿನ ಜಾವದ ವಾತಾವರಣ ಅತ್ಯಂತ ಪರಿಶುದ್ಧವಾಗಿರುವುದರಿಂದ ಗಾಳಿಯಲ್ಲಿ ಹೆಚ್ಚು ಶುದ್ಧವಾದ ಆಮ್ಲಜನಕ ವಿರುವುದರಿಂದ ಸೂಕ್ತ ಸಡಿಲವಾದ ಉಡುಪನ್ನು ಧರಿಸಿ ಬರಿಗಾಲಿನಲ್ಲಿಒಂದಷ್ಟು ನಡೆಯುವುದು ಆರೋಗ್ಯಕ್ಕೆ ಹಿತವನ್ನು ನೀಡಬಲ್ಲುದು. ಇಬ್ಬನಿ ಬಿದ್ದಿರುವ ಹುಲ್ಲಿನ ಮೇಲೆ ನಡೆಯುವುದೂ ಅರೊಗ್ಯಕ್ಕೆ ಅತ್ಯಂತ ಒಳ್ಳೆಯದು ಎಂದು ಆಯುರ್ವೇದ ಶಾಸ್ತ್ರದಲ್ಲಿ ಹೇಳಲಾಗಿದೆ. ದಿನವಿಡೀ ಕೆಲಸ ಮಾಡಲು ಅವಶ್ಯವಿರುವ ಶಕ್ತಿಯನ್ನು ಗಳಿಸಿಕೊಳ್ಳಬಹುದು. ಬೆಳಗ್ಗೆ ಎದ್ದ ಕೂಡಲೇ ಹೇರಳವಾಗಿ ಕುದಿಸಿ ಆರಿಸಿದ ನೀರನ್ನು ಕುಡಿಯುವುದರಿಂದ ದೇಹವು ಹೆಚ್ಚು ಉಲ್ಲಸಿತವಾಗಿರುತ್ತದೆ. ಬೆಳಗ್ಗಿ ಅವಧಿಯಲ್ಲಿಧ್ಯಾನ, ಯೋಗ ಮತ್ತು ಪ್ರಾಣಾಯಾಮಗಳನ್ನು ಮಾಡುವುದರಿಂದ ಮನಸ್ಸು ಹೆಚ್ಚಾಗಿ ಧನಾತ್ಮಕ ವಿಷಯಗಳೆಡೆಗೆ ಏಕಾಗ್ರಗೊಳ್ಳುವಂತೆ ಮಾಡಬಹುದು. ಬೆಳಗ್ಗೆ ಆದಷ್ಟು ಮನಸ್ಸಿಗೆ ಹಿತ ನೀಡುವಂತಹ ದೇವರ ಸ್ತೋತ್ರಗಳನ್ನು ಕೇಳುವ ಪರಿಪಾಠವನ್ನು ಬೆಳೆಸಿಕೊಳ್ಳುವುದರಿಂದ ಮನಸ್ಸು ಸದಾಧನಾತ್ಮಕವಾಗಿ ಯೋಚಿಸುತ್ತಿರುತ್ತದೆ.

arti-1

ಮುಂಜಾನೆಯ ಹೊತ್ತು ಹಿಂದಿನ ರಾತ್ರಿ ನೆನೆಯಿಸಿ ಇಟ್ಟ ವಿವಿಧ ಬಗೆಯ ಕಾಳುಗಳನ್ನು ಬರೀ ಹೊಟ್ಟೆಯಲ್ಲಿ ತಿನ್ನುವ ಅಭ್ಯಾಸವನ್ನು ರೂಢಿಸಿಕೊಳ್ಳಬಹುದು. ಇಡೀ ದಿನದ ಕೆಲಸ ನಿರ್ವಹಣೆಗೆ ಅವಶ್ಯವಿರುವ ಶಕ್ತಿಯನ್ನು ಬೆಳಗ್ಗಿನ ಉಪಾಹಾರವೇ ನೀಡುವುದರಿಂದ ಉಪಾಹಾರವು ರಾಜಮರ್ಯಾದೆಯಿಂದ ಕೂಡಿರಲಿ ಅಂದರೆ ಪೌಷ್ಟಿಕಾಂಶ ಯುಕ್ತವಾದ ಆಹಾರವನ್ನು ಸೇವಿಸಿರಿ. ಮಧ್ಯಾಹ್ನದ ಊಟ ರೈತನ ಆಹಾರದಂತೆ ಇರಲಿ (ಹಿತಮಿತವಾಗಿರಲಿ) ಮತ್ತು ರಾತ್ರಿಯ ಊಟ ಮಿತವಾಗಿರಲಿ. ಉದ್ಯೋಗದಲ್ಲಿ ಎಷ್ಟೇ ಮೇಲಿನ ಹುದ್ದೆಯಲ್ಲಿದ್ದರೂ ಸರಳ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದು ಉತ್ತಮ. ನಿತ್ಯದ ದಿನಚರಿಯನ್ನು ಸಮರ್ಪಕವಾದ ವೇಳಾಪಟ್ಟಿಯನ್ನು ಹಾಕಿಕೊಂಡುಕ್ಲಪ್ತ ಸಮಯದಲ್ಲಿ ನಿರ್ವಹಿಸಿ ರಾತ್ರಿ 10.30 ರೊಳಗೆ ಮಲಗಿ ಬೆಳಗಿನ ಜಾವ 5.00 ಗಂಟೆಗೇ ಏಳುವ ಪರಿಪಾಠ ಉತ್ತಮ ಜೀವನ ಕ್ರಮಕ್ಕೆ ನಾಂದಿ ಹಾಡಬಲ್ಲದು.

ಜೀವನದಲ್ಲಿ ಸದಾ ಮುಜುಗರವುಂಟು ಮಾಡುವ ಹಾಗೂ ನಮ್ಮನ್ನು ಕಡೆಗಣಿಸು ವವರಿಂದ ಸದಾದೂರವಿದ್ದಲ್ಲಿ ಅದು ನಮಗೇ ಒಳ್ಳೆಯದು. ಬದುಕಿನ ಪ್ರತೀ ಕ್ಷಣಗಳಲ್ಲೂ ತನ್ನಬದುಕಿನ ಪ್ರಮುಖಗುರಿಯ ಬಗ್ಗೆ ಚಿಂತಿಸುತ್ತಾ ಅದನ್ನು ಸಾಧಿಸುವ ನಿಟ್ಟಿಲ್ಲಿ ಯೋಜನೆಗಳನ್ನು ಹಾಕಿಕೊಳ್ಳುತ್ತಾ ಇರುವುದು ಉತ್ತಮ ಹವ್ಯಾಸವಾಗಬಹುದು. ಜೀವನದಲ್ಲಿ ಅಚ್ಚುಕಟ್ಟಾದ ಆಹಾರಕ್ರಮಗಳನ್ನು ಪಾಲಿಸುವುದರೊಂದಿಗೆ ತಾಜಾ ಮತ್ತು ಹಸಿ ತರಕಾರಿಗಳನ್ನು ಸೇವಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು, ಕುರುಕಲು ಮತ್ತುಕರಿದ ತಿಂಡಿಗಳಿಂದ ದೂರವಿರುವುದು ಉತ್ತಮ. ನಿತ್ಯದ ಕೆಲಸದಒತ್ತಡದಿಂದ ಹೊರಬರುವ ನಿಟ್ಟಿನಲ್ಲಿ ಸಿಗುವ ರಜಾ ದಿನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಕುಟುಂಬದ ಸದಸ್ಯರು ಅಥವಾ ಕುಟುಂಬದವರೊಂದಿಗೆ ಪ್ರವಾಸಕ್ಕೆ ತೆರಳಿ ಸಂತೋಷದಿಂದ ದಿನವನ್ನು ಕಳೆಯುವುದರೊಂದಿಗೆ ಮುಂದಿನ ದಿನದ ಕೆಲಸಕ್ಕೆ ಅವಶ್ಯವಿರುವ ಉತ್ಸಾಹವನ್ನು ಗಳಿಸಿಕೊಳ್ಳಬಹುದು. ಉತ್ತಮವಾದ ಬದುಕಿನ ಸಂದೇಶವಿರುವ ಚಲನಚಿತ್ರಗಳನ್ನು ನೋಡಿ ಅವುಗಳ ಸಾರಾಂಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಉತ್ತಮ. ನಮ್ಮ ಕಛೇರಿಯಲ್ಲಿ, ಕುಟುಂಬದಲ್ಲಿ ಮತ್ತು ಸಾರ್ವಜನಿಕವಾಗಿ ದೊರೆಯುವ ವಿವಿಧ ಅವಕಾಶಗಳನ್ನು ಬದುಕನ್ನು ರೂಪಿಸುವ ಮೆಟ್ಟಿಲುಗಳನ್ನಾಗಿ ಬಳಸಿಕೊಳ್ಳುವ ಮನಃಸ್ಥಿತಿಯನ್ನು ಬೆಳೆಸಿಕೊಳ್ಳಬೇಕು.

ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿತನ್ನದೇ ಆದ ಅಚ್ಚುಕಟ್ಟುತನವನ್ನು ಅಳವಡಿಸಿಕೊಳ್ಳುವುದೂ ಉತ್ತಮ ಹವ್ಯಾಸಗಳಲ್ಲೊಂದಾಗ ಬಹುದು. ತನ್ನದೇಶ, ತನ್ನರಾಜ್ಯ, ತನ್ನಜಿಲ್ಲೆ, ತನ್ನತಾಲೂಕು, ತನ್ನ ಹಳ್ಳಿಯ ಮೇಲೆ ಸದಾಅಭಿಮಾನವಿದ್ದು, ಅನ್ನದಾತನಾದ ರೈತನನ್ನು ಹಾಗೂ ದೇಶಕಾಯುವ ಸೈನಿಕರನ್ನು ಗೌರವಿಸುವ ಮನೋಧರ್ಮವಿರಬೇಕು. ನಿತ್ಯ ಹೊಸ ಹೊಸ ವಿಚಾರಗಳನ್ನು ತಜ್ಞರಿಂದ ತಿಳಿದುಕೊಳ್ಳುವುದೂ ಒಂದುರೀತಿಯ ಸದಭಿರುಚಿಯ ಹವ್ಯಾಸವೇ.
ದಿನನಿತ್ಯ ಪತ್ರಿಕೆಗಳು, ಪುಸ್ತಕಗಳು ಮತ್ತು ಮ್ಯಾಗಝಿನ್‍ಗಳನ್ನು ಓದಿ ಜ್ಞಾನವನ್ನು ಸಂಪಾದಿಸುವುದರೊಂದಿಗೆ ಬರವಣಿಗೆಯ ಅಭ್ಯಾಸವನ್ನೂ ರೂಢಿಸಿಕೊಂಡಲ್ಲಿ ಅಪಾರವಾದ ಪಂಡಿತ್ಯವನ್ನು ಸುಲಭವಾಗಿ ಗಳಿಸಿಕೊಳ್ಳಬಹುದಾಗಿದೆ. ಮನಸ್ಸಿಗೆ ಮುದ ನೀಡುವ ಹಾಡನ್ನು ಕೇಳುವುದು ಮತ್ತು ಹಾಡನ್ನು ಹಾಡುವುದರೊಂದಿಗೆ ನೃತ್ಯ ಮತ್ತು ಕ್ರೀಡೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರೊಂದಿಗೆ ಸದಾ ಕ್ರಿಯಾಶೀಲರಾಗಿರಬಹುದು. ಸದಾ ಮೊಬೈಲ್ ಹಾಗೂ ಟಿ.ವಿಗೆ ಅಂಟಿಕೊಂಡಿ ರುವುದರ ಬದಲಾಗಿ ಕುಟುಂಬದ ಸದಸ್ಯರು ಹಾಗೂ ಸ್ನೆಹಿತರೊಂದಿಗೆ ಕುಳಿತು ಸಹ ಭೋಜನವನ್ನು
ಮಾಡುವ ಅಭ್ಯಾಸವನ್ನೂ ರೂಢಿಸಿಕೊಳ್ಳಬಹುದು. ಸ್ವಚ್ಛವಾದ ಹಾಗೂ ಅಚ್ಚುಕಟ್ಟಾದ ಉಡುಗೆಗಳನ್ನು ತೊಡುವುದರಿಂದಇತರರು ನಮ್ಮನ್ನುಗೌರವಿಸುವಂತೆ ಮಾಡಬಹುದು.

arti

# ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳುವ ಬಗೆ:
ಇತರರಂತೆ ಸಾಮಾನ್ಯ ಬದುಕನ್ನು ಬಾಳುವ ಬದಲು ವಿಭಿನ್ನವಾದ ಹಾಗೂ ವೈಶಿಷ್ಟ್ಯಪೂರ್ಣವಾದ ಬದುಕನ್ನು ಬಾಳಬೇಕೆಂಬ ಅದಮ್ಯವಾದಛಲವನ್ನು ಹೊಂದಬೇಕು. ಬದುಕಿನ ಪ್ರತಿಯೊಂದು ಕ್ಷಣಗಳನ್ನೂ ದೈನಂದಿನ ವೇಳಾಪಟ್ಟಿ ಗನುಗುಣವಾಗಿಯೇ ನಿರ್ವಹಿಸಿಕೊಂಡು ಹೋಗುವೆಡೆಗೆ ವಿಶೇಷ ಕಾಳಜಿಯನ್ನು ವಹಿಸಲೇಬೇಕು. ಮನಸ್ಸಿಗೆ ಕ್ಷಣಿಕ ಖುಷಿಯನ್ನು ಕೊಡುವ ಅನಗತ್ಯ ಕೆಟ್ಟಗೆಳೆಯರಿಂದ ಆದಷ್ಟು ದೂರವಿದ್ದು, ಮನಸ್ಸು ಅನಗತ್ಯ ವಿಚಾರಗಳೆಡೆಗೆ ಜಾರುವ ಸಂದರ್ಭವಿದ್ದಲ್ಲಿ ನಮಗೆ ಆಸಕ್ತಿ ಮೂಡಿಸುವ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಹವ್ಯಾಸಗಳೆಡೆಗೆ ಮನಸ್ಸನ್ನು ಕೇಂದ್ರೀಕೃತಗೊಳಿಸಬಹುದು. ಆಹಾರದ ವಿಚಾರದಲ್ಲಿ ಅನಿವಾರ್ಯವಾದ ಸಮಯ ಹಾಗೂ ಸಂದರ್ಭಗಳಲ್ಲೂ ತನ್ನ ಆಹಾರದ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಉತ್ತಮ. ಗೆದ್ದರೆ ಮನಸ್ಸಿಗೆ ಸಾಧನೆಯನೆಮ್ಮದಿ, ಸೋತಲ್ಲಿ ಹೊಸ ಪಾಠದ ಕಲಿಕೆಗೆ ಅವಕಾಶ ಎಂಬ ಮನೋಧರ್ಮದೊಂದಿಗೆ ಅಸಾಧ್ಯ ಹಾಗೂ ಕಠಿಣ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಿ ಅದರಲ್ಲಿ ಗೆಲುವನ್ನು ಸಾಧಿಸಲುಸದಾಪ್ರಯತ್ನಿಸುತ್ತಿರುವುದು. ಕಷ್ಟದಲ್ಲಿರುವವಿಗೆ ಸಹಾಯವನ್ನು ಮಾಡುವ, ಇತರರ ಮಾತನ್ನು ವಿಧೇಯತೆಯಿಂದ ಕೇಳುವ ಸಹನೆ ಹಾಗೂ ತಾಳ್ಮೆ ಮತ್ತು ಹೊಂದಾಣಿಕೆಯ ಗುಣಗಳನ್ನು ರೂಢಿಸಿಕೊಳ್ಳುವುದು. ದೈನಂದಿನ ಕೆಲಸ ಕಾರ್ಯಗಳನ್ನು ಬೆಳಗ್ಗೆ ಏಳುವುದರಿಂದ ರಾತ್ರಿ ಮಲಗುವವರೆಗಿನಎಲ್ಲಾ ಕೆಲಸ ಕಾರ್ಯಗಳನ್ನು ಸಮರ್ಪಕವಾದ ವೇಳಾಪಟ್ಟಿಯಂತೆಯೇ ನಿರ್ವಹಿಸುವುದು.

Facebook Comments

Sri Raghav

Admin