19 ದಿನಗಳ ನಂತರ ಹಾರ್ದಿಕ್ ಪಟೇಲ್ ಉಪವಾಸ ಸತ್ಯಾಗ್ರಹ ಅಂತ್ಯ

ಈ ಸುದ್ದಿಯನ್ನು ಶೇರ್ ಮಾಡಿ

Hardik-Patel

ಅಹಮದಾಬಾದ್‌. ಸೆ.13 : ಕಳೆದ 19 ದಿನಗಳಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಪಟೇಲ್‌ ಸಮುದಾಯದ ಮುಖಂಡ ಹಾರ್ದಿಕ್‌ ಪಟೇಲ್‌ ಬುಧವಾರ ಅಂತ್ಯಗೊಳಿಸಿದ್ದಾರೆ. ರೈತರ ಸಾಲ ಮನ್ನಾ ಮಾಡಬೇಕು ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯೋಗಗಳಲ್ಲಿ ಪಟೇಲ್‌ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಬೇಕು ಹಾಗೂ ದೇಶದ್ರೋಹ ಆರೋಪದ ಮೇಲೆ ಬಂಧಿಸಿರುವ ತಮ್ಮ ಆಪ್ತ ಅಲ್ಪೇಶ್‌ ಕಥಿರಿಯಾ ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಹಾರ್ದಿಕ್‌ ಪಟೇಲ್‌ ಆಗಸ್ಟ್‌ 25ರಿಂದ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.

ಸರಕಾರದಿಂದ ಸ್ಪಂದನೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದ ಅವರಿಗೆ ಯಾವುದೇ ರೀತಿ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ನೀರನ್ನು ಕೂಡ ಸೇವಿಸುವುದನ್ನು ನಿಲ್ಲಿಸಿದ ಮೇಲೆ ಆರೋಗ್ಯ ಕ್ಷೀಣಿಸುತ್ತಾ ಬಂದಿದ್ದರಿಂದ ಕಳೆದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಂಬಲಿಗರ ಒತ್ತಾಯಕ್ಕೆ ಮಣಿದು ಉಪವಾಸ ಸತ್ಯಾಗ್ರಹ ನಿಲ್ಲಿಸಿದ ನಂತರ ಟ್ವೀಟ್ ಮಾಡಿದ ಅವರು, ನನ್ನನ್ನು ಪ್ರೀತಿಸುವವರ ಸಲುವಾಗಿ, ಜೀವಂತ ಇರಲು ಬಯಸುವವರಿಗಾಗಿ ಸಾಯಲು ಕೂಡ ಸಿದ್ಧ. ಆದರೆ ನನ್ನ ಗೆಳೆಯರ ಸಲುವಾಗಿ ಬದುಕುತ್ತೇನೆ ಹೊರತು ನನ್ನನ್ನು ಕೊಲ್ಲಲು ಬಯಸುವವರ ಪ್ರಯತ್ನ ಸಫಲ ಆಗುವುದಕ್ಕೆ ಬಿಡುವುದಿಲ್ಲ ಎಂದಿದ್ದಾರೆ.

‘ಹಿರಿಯ ಮುಖಂಡರು ನೀಡಿರುವ ಸಲಹೆಯನ್ನು ಗೌರವಿಸುವ ಉದ್ದೇಶದಿಂದ ಸತ್ಯಾಗ್ರಹ ಅಂತ್ಯಗೊಳಿಸಿದ್ದೇನೆ. ನಾವೆಲ್ಲವೂ ಒಗ್ಗಟ್ಟಾಗಿದ್ದೇವೆ ಎನ್ನುವುದನ್ನು ತೋರಿಸಬೇಕಾಗಿದೆ. ನಾವು ಹೋರಾಟ ನಡೆಸಲು ಬದುಕಬೇಕಾಗಿದೆ. ಬದುಕಲು ಹೋರಾಟ ನಡೆಸಬೇಕಾಗಿದೆ’ ಎಂದು ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಬಳಿಕ ಹಾರ್ದಿಕ್‌ ಹೇಳಿದರು. ‘ಸರ್ಕಾರದ ವಿರುದ್ಧ ಮಾತನಾಡುವವರನ್ನು ದೇಶದ್ರೋಹಿ ಎಂದು ಬಿಂಬಿಸಲಾಗುತ್ತಿದೆ. ಮಾತನಾಡದಿದ್ದರೆ ಮೌನಿ ಎಂದು ಟೀಕಿಸುತ್ತಾರೆ. ಹೀಗಾಗಿ, ದೇಶದ್ರೋಹಿ ಎಂದೇ ಕರೆಯಿಸಿಕೊಳ್ಳಲು ನಾನು ಇಚ್ಛಿಸುತ್ತೇನೆ’ ಎಂದು ಹಾರ್ದಿಕ್‌ ಹೇಳಿದ್ದಾರೆ.

’19 ದಿನಗಳ ಉಪವಾಸದಿಂದ ಹೊಸ ಚೈತನ್ಯ ಮೂಡಿದೆ. ಮುಂದಿನ ದಿನಗಳಲ್ಲಿ ರೈತರ ವಿಷಯಗಳಿಗಾಗಿ ಗುಜರಾತ್‌ನ 12 ಸಾವಿರ ಗ್ರಾಮಗಳಿಗೆ ತೆರಳಿ ಅರಿವು ಮೂಡಿಸುವ ಪ್ರಯತ್ನ ಮಾಡುತ್ತೇನೆ. ಗಾಂಧಿನಗರಕ್ಕೆ ಬರುವ ವೇಳೆಗೆ ಬಿಜೆಪಿ ಸರ್ಕಾರ ಪತನಗೊಂಡಿರುತ್ತದೆ’ ಎಂದು ತಿಳಿಸಿದರು.
24 ವರ್ಷದ ಹಾರ್ದಿಕ್ ಪಟೇಲ್ ಆಗಸ್ಟ್ 25ರಿದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದರು. “ಈ ಹೋರಾಟ ಕಾಂಗ್ರೆಸ್ ಪ್ರೇರಿತವಾದದ್ದು” ಎಂದು ಸರಕಾರ ಆರೋಪ ಮಾಡಿತ್ತು.

Facebook Comments

Sri Raghav

Admin