ಇಂದಿನ ಪಂಚಾಗ ಮತ್ತು ರಾಶಿಫಲ (13-09-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ಎಲ್ಲಾ ಪ್ರಾಣಿಗಳಿಗೂ ಜೀವನವನ್ನು ಕಲ್ಪಿಸತಕ್ಕ ಈ ಮರಗಳ ಜನ್ಮ ಎಷ್ಟೋ ಉತ್ತಮ. ಸತ್ಪುರುಷರ ದೆಸೆಯಿಂದ ಹೇಗೆ ವಿಮುಖರಾಗಿ ಅರ್ಥಿಗಳು ಹಿಂದಿರುಗುವುದಿಲ್ಲವೋ ಹಾಗೆ ಈ ಮರಗಳಿಂದಲೂ ವಿಮುಖರಾಗುವುದಿಲ್ಲ. -ಭಾಗವತ

Rashi

ಪಂಚಾಂಗ :13.09.2018 ಗುರುವಾರ
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.22
ಚಂದ್ರ ಉದಯ ಬೆ.09.19 / ಚಂದ್ರ ಅಸ್ತ ರಾ.09.24
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು
ಭಾದ್ರಪದ ಮಾಸ / ಶುಕ್ಲ ಪಕ್ಷ / ತಿಥಿ : ಚತುರ್ಥಿ (ಮ.02.52)
ನಕ್ಷತ್ರ: ಸ್ವಾತಿ,(ರಾ.12.53) / ಯೋಗ: ಇಂದ್ರ (ರಾ.12.36)
ಕರಣ: ಭದ್ರೆ-ಭವ (ಮ.02.52-ರಾ.02.32)
ಮಳೆ ನಕ್ಷತ್ರ: ಉತ್ತರಫಲ್ಗುಣಿ (ರಾ.08.41 ಪ್ರವೇಶ) ಮಾಸ: ಸಿಂಹ / ತೇದಿ: 28

ಇಂದಿನ ವಿಶೇಷ : ವರಸಿದ್ಧಿ ವಿನಾಯಕ ವ್ರತ 

# ರಾಶಿ ಭವಿಷ್ಯ
ಮೇಷ : ಬೇರೆಯವರೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಮನೋಭಿಲಾಷೆ ಈಡೇರಲಿದೆ
ವೃಷಭ : ಪ್ರಯಾಣದಿಂದ ಅನುಕೂಲವಾಗಲಿದೆ
ಮಿಥುನ: ಅಜೀರ್ಣದಿಂದ ತೊಂದರೆ ಉಂಟಾಗಲಿದೆ
ಕಟಕ : ಸಹೋದ್ಯೋಗಿಗಳ ಕಿರುಕುಳ. ವಿನಾಕಾರಣ ಅಪವಾದ. ಮಾನಸಿಕ ಅಶಾಂತಿ
ಸಿಂಹ: ಆರೋಗ್ಯದ ಕಡೆ ಹೆಚ್ಚು ಲಕ್ಷ್ಯವಿರಲಿ. ಮಕ್ಕಳಿಂದ ಕೀರ್ತಿ ಹೆಚ್ಚುತ್ತದೆ
ಕನ್ಯಾ: ಹಣ ಖರ್ಚು ಮಾಡು ವಾಗ ಹಿಡಿತವಿರಲಿ, ಮೋಸ ಹೋಗುವ ಸಾಧ್ಯತೆಗಳಿವೆ
ತುಲಾ: ಕೆಲಸದ ನಿಮಿತ್ತ ಹಣ ವ್ಯಯವಾಗಲಿದೆ. ಆರ್ಥಿಕ ಅನುಕೂಲತೆ
ವೃಶ್ಚಿಕ: ಪ್ರಯಾಣದಿಂದ ನಷ್ಟ ವಾಗುವ ಸಾಧ್ಯತೆಯಿದೆ. ಪ್ರತಿಸ್ಪರ್ಧಿಗಳಿಂದ ಲಾಭವಿದೆ
ಧನುಸ್ಸು: ಸ್ನೇಹಿತರಿಂದ ಅವಮಾನವಾಗುವ ಸಾಧ್ಯತೆ
ಮಕರ: ಆರೋಗ್ಯದಲ್ಲಿ ಸುಧಾರಣೆ. ಶತ್ರುಗಳು ದೂರವಾಗುತ್ತಾರೆ. ವಿದ್ಯಾರ್ಥಿಗಳಿಗೆ ಧನಲಾಭ
ಕುಂಭ: ರಾಘವೇಂದ್ರ ಸ್ವಾಮಿ ದರ್ಶನ ಮಾಡಿ
ಮೀನ: ಪರಸ್ಪರ ಸಹಕಾರದಿಂದ ಕಾರ್ಯಸಾಧನೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin