ಐಎಸ್‍ಎಸ್‍ಎಫ್ ವಿಶ್ವ ಚಾಂಪಿಯನ್‍ಶಿಫ್ ಕೊನೆಯ ದಿನವೂ ಪದಕಗಳ ಬೇಟೆ

ಈ ಸುದ್ದಿಯನ್ನು ಶೇರ್ ಮಾಡಿ

ISSF-Chaopianship

ಚಾಂಗ್‍ವೋನ್(ದಕ್ಷಿಣಕೊರಿಯಾ), ಸೆ.14 (ಪಿಟಿಐ)- ವಿಶ್ವ ಚಾಂಪಿಯನ್‍ಶಿಫ್‍ನ ಕೊನೆಯ ದಿನವೂ ಕಿರಿಯ ಶೂಟರ್‍ಗಳು 2 ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ರಂಗು ಮೂಡಿಸಿದ್ದಾರೆ.  ಇಂದಿಲ್ಲಿ ನಡೆದ ಪುರುಷರ ಹಿರಿಯ ವಿಭಾಗದಲ್ಲಿ ಭಾರತದ ಗುರುಪ್ರೀತ್‍ಸಿಂಗ್ ಅವರು ಬೆಳ್ಳಿಪದಕಕ್ಕೆ ತೃಪ್ತಿಪಟ್ಟರೆ, ಜೂನಿಯರ್ ವಿಭಾಗದಲ್ಲಿ ವಿಜಯ್‍ವೀರ್‍ಸಿಧು (16) 25 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರೆ, ಗುಂಪು ವಿಭಾಗದಲ್ಲಿ ರಾಜ್‍ಕನ್ವರ್ ಸಿಂಗ್ ಸಂಧು ಮತ್ತು ಆದರ್ಶ ಸಿಂಗ್ ಅವರು ಚಿನ್ನದ ಬೇಟೆಯಾಡಿದ್ದಾರೆ.

ಸೆಮಿಫೈನಲ್ ಪಂದ್ಯದಲ್ಲಿ 572 ಅಂಕ ಗಳಿಸಿ ನಾಲ್ಕನೇ ಸ್ಥಾನಿಯಾಗಿದ್ದ ಸಿಧು ಇಂದು ತಮ್ಮ ಗುರಿಯನ್ನು ಉತ್ತಮಗೊಳಿಸಿಕೊಳ್ಳುವ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಭಾರತದ ಸಿಂಗ್ ಈ ವಿಭಾಗದಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಗುರುಪ್ರೀತ್‍ಗೆ ಒಲಿದ ಬೆಳ್ಳಿ:
ಪುರುಷರ ಹಿರಿಯರ ವಿಭಾಗದಲ್ಲಿ ಕಾಮನ್‍ವೆಲ್ತ್‍ನಲ್ಲಿ ಚಿನ್ನದ ಪದಕ ಗೆದ್ದಿದ್ದ ಗುರುಪ್ರೀತ್ ಸಿಂಗ್ ವಿಶ್ವ ಚಾಂಪಿಯನ್‍ನ ಫೈನಲ್ಸ್‍ನಲ್ಲಿ 579 ಅಂಕಗಳನ್ನು ಪಡೆಯುವ ಮೂಲಕ ಬೆಳ್ಳಿ ಪದಕವನ್ನು ಕೊರಳಿಗೇರಿಸಿಕೊಂಡರೆ, ಉಕ್ರೇನ್‍ನ ಪವ್‍ಲೋ ಕೊರೊಸ್ತೈಲೋವ್ (581) ಚಿನ್ನದ ಪದಕ ಹಾಗೂ ಕೊರಿಯಾದ ಕಿಮ್ ಜುನ್‍ಹೋಂಗ್ ಅವರು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.  ಗುಂಪು ವಿಭಾಗದಲ್ಲಿ ಗುರುಪ್ರೀತ್, ಅಮಾನ್‍ಪ್ರೀತ್ ಸಿಂಗ್ ಹಾಗೂ ಲಂಡನ್ ಒಲಿಂಪಿಕ್‍ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ವಿಜಯ್‍ಕುಮಾರ್ ಅವರು ಒಟ್ಟು 1699 ಅಂಕಗಳನ್ನು ಪಡೆಯುವ ಮೂಲಕ 4ನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ನಿರಾಸೆ ಮೂಡಿಸಿದ ಮಹಿಳಾ ಶೂಟರ್‍ಗಳು:
ಮಹಿಳೆಯರ ಕಿರಿಯರ ವಿಭಾಗದ ಸ್ಕೆಟ್‍ನಲ್ಲಿ ಸಿಮ್‍ರಾನ್‍ಪ್ರೀತ್‍ಕೌರ್, ಪರಿನ್‍ಜಾ ದಾಲ್ಲಿವಾಲ್ ಹಾಗೂ ಅರೀಬಾಖಾನ್ ಅವರು 318 ಪಾಯಿಂಟ್ ಪಡೆದು 4ನೆ ಸ್ಥಾನಕ್ಕೆ ಕುಸಿದರು. 2020ರ ಒಲಿಂಪಿಕ್ಸ್‍ಗೆ ಶೂಟರ್ಸ್‍ಗಳಾದ ಅಜುಂ ಮುದ್ಗಿಲ್ ಹಾಗೂ ಅಪೂರ್ವಿ ಅವರು ಅವರು ನೇರ ಅರ್ಹತೆಯನ್ನು ಪಡೆದರು. ಭಾರತ ತಂಡವು ಈ ಬಾರಿ ವಿಶ್ವ ಚಾಂಪಿಯನ್‍ಶಿಫ್‍ನಲ್ಲೂ ಉತ್ತಮ ಹೋರಾಟ ಪ್ರದರ್ಶಿಸಿದ್ದು 11 ಚಿನ್ನ, 9 ಬೆಳ್ಳಿ, 7 ಕಂಚು ಸೇರಿದಂತೆ 27 ಪದಕಗಳನ್ನು ಗೆಲ್ಲುವ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ 3ನೆ ಸ್ಥಾನವನ್ನು ಅಲಂಕರಿಸಿದೆ.

Facebook Comments

Sri Raghav

Admin