ದಸರಾ ಕಾರ್ಯಕಾರಿ ಸಭೆಯಲ್ಲಿ ಶಾಸಕರ ಮುನಿಸು

ಈ ಸುದ್ದಿಯನ್ನು ಶೇರ್ ಮಾಡಿ

Dasara-Meeting--01

ಮೈಸೂರು, ಸೆ.14- ಇಂದು ನಡೆದ ದಸರಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಚಿವ ಪುಟ್ಟರಂಗಶೆಟ್ಟಿ ಸೇರಿದಂತೆ ಕೆಲ ಶಾಸಕರು ತಮ್ಮನ್ನು ಕಡೆಗಣಿಸಿದ್ದೀರಿ ಎಂದು ಅಸಮಾಧಾನ ಹೊರಹಾಕಿದ ಘಟನೆ ನಡೆಯಿತು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ಅಧ್ಯಕ್ಷತೆಯಲ್ಲಿಂದು ನಡೆದ ದಸರಾ-2018ರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಚಿವ ಸಾ.ರಾ.ಮಹೇಶ್, ಪುಟ್ಟರಂಗಶೆಟ್ಟಿ, ಶಾಸಕರಾದ ಹರ್ಷವರ್ಧನ, ನಾಗೇಂದ್ರ, ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣೇಶ್ವರ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮತ್ತಿತರರು ಪಾಲ್ಗೊಂಡಿದ್ದರು.

ಸಭೆ ಆರಂಭದಲ್ಲೇ ಸಚಿವ ಪುಟ್ಟರಂಗಶೆಟ್ಟಿ ಸುಮ್ಮನೆ ನಮ್ಮನ್ನು ಸಭೆಗೆ ಆಹ್ವಾನಿಸಿದ್ದೀರ? ನಿಮಗೆ ಬೇಕಾದಂತೆ ನಿರ್ಧಾರ ಕೈಗೊಳ್ಳುತ್ತಿದ್ದೀರ? ಯಾವ ವಿಷಯವನ್ನೂ ಕೂಡ ನಮ್ಮ ಗಮನಕ್ಕೆ ತರುತ್ತಿಲ್ಲ ಎಂದು ಗರಂ ಆದರು. ಅವರನ್ನು ಸಮಾಧಾನಪಡಿಸಲು ಪ್ರಯತ್ನ ನಡೆಯಿತಾದರೂ ತಣ್ಣಗಾಗದ ಅವರು ಕೂಡಲೇ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷ ಸ್ಥಾನವನ್ನು ತಮಗೆ ನೀಡಬೇಕೆಂದು ಒತ್ತಾಯಿಸಿದರು.

ಇದರ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿ.ಟಿ.ದೇವೇಗೌಡ, ತಾಳ್ಮೆಯಿಂದಿರಿ. ಎಲ್ಲವನ್ನೂ ಸರಿಪಡಿಸೋಣ ಎಂದು ಹೇಳಿದರು. ಇದೇ ವೇಳೆ ಶಾಸಕರಾದ ಹರ್ಷವರ್ಧನ್, ನಾಗೇಂದ್ರ ಕೂಡ ತಮ್ಮನ್ನು ವಿವಿಧ ಸಮಿತಿಗಳಿಗೆ ಸದಸ್ಯರನ್ನಾಗಿ ನೇಮಿಸಬೇಕು ಎಂದು ಮನವಿ ಮಾಡಿದರು. ದೋಸ್ತಿ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರನ್ನು ಕಡೆಗಣಿಸಲಾಗುತ್ತಿದೆ. ನೀವು ಕೇವಲ ಸಭೆ ಎಂದು ಹೇಳಿದ್ದೀರ. ಹಾಗಾಗಿ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಶಾಸಕರು ಭಾಗವಹಿಸಿಲ್ಲ ಎಂದರು.

ಇದೇ ವೇಳೆ ಸಚಿವ ಜಿ.ಟಿ.ದೇವೇಗೌಡರು ಮಧ್ಯಪ್ರವೇಶಿಸಿ ಇದು ನಮ್ಮೊಬ್ಬರ ದಸರಾ ಹಬ್ಬ ಅಲ್ಲ, ಜನತೆಯ ದಸರಾ ಹಬ್ಬ. ಎಲ್ಲರೂ ಭಾಗವಹಿಸಬೇಕು ಎಂದು ಹೇಳಿದಾಗ, ಶಾಸಕರು ಸಮಾಧಾನಗೊಂಡರು. ತದನಂತರ ದಸರಾ ಪೊೀಸ್ಟರ್‍ಗಳು ಹಾಗೂ ವೆಬ್‍ಸೈಟ್‍ಅನ್ನು ಜಿ.ಟಿ.ದೇವೇಗೌಡರು ಬಿಡುಗಡೆ ಮಾಡಿದರು.

Facebook Comments

Sri Raghav

Admin