ಉಗ್ರ ಹಫೀಜ್ ನೇತೃತ್ವದ ಜೆಯುಡಿ ಪಕ್ಷದ ಕಾರ್ಯಚಟುವಟಿಕೆಗೆ ಪಾಕ್ ಸುಪ್ರೀಂ ಅಸ್ತು

ಈ ಸುದ್ದಿಯನ್ನು ಶೇರ್ ಮಾಡಿ

Hafiz

ಲಾಹೋರ್, ಸೆ.14- ಮಹತ್ವದ ಬೆಳವಣಿಗೆಯಲ್ಲಿ ಉಗ್ರ ಹಫೀಜ್ ಸಯ್ಯೀದ್ ನೇತೃತ್ವದ ಜಮಾತ್‍ಉದ್‍ದವಾ (ಜೆಯುಡಿ) ಸೇರಿದಂತೆ ಹಲವು ಸಂಘಟನೆಗಳ ಕಾರ್ಯಚಟುವಟಿಕೆ ಮುಂದುವರಿಕೆಗೆ ಪಾಕಿಸ್ತಾನ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ಈ ಹಿಂದೆ ಮುಂಬೈ ದಾಳಿಯೂ ಸೇರಿದಂತೆ ಪಾಕಿಸ್ತಾನದಲ್ಲಿ ನಡೆದಿದ್ದ ವಿವಿಧ ಭಯೋತ್ಪಾದಕ ದಾಳಿಗಳಲ್ಲಿ ಹಫೀಜ್ ಸಯ್ಯೀದ್‍ನ ಜೆಯುಡಿ ಹಸ್ತಕ್ಷೇಪ ಮತ್ತು ಉಗ್ರ ಚಟುವಟಿಕೆ ಹಿನ್ನಲೆಯಲ್ಲಿ ಪಾಕಿಸ್ತಾನ ಸರ್ಕಾರ ಜೆಯುಡಿ, ಎಫ್‍ಐಎಫ್ ಸೇರಿದಂತೆ ಹಲವು ಸಂಘಟನೆಗಳ ಕಾರ್ಯಚಟುವಟಿಕೆ ಮೇಲೆ ನಿಷೇಧ ಹೇರಿತ್ತು.

ಇದನ್ನು ಪ್ರಶ್ನಿಸಿ ಸಂಘಟನೆಗಳು ಲಾಹೋರ್ ಕೋರ್ಟ್ ಮೊರೆ ಹೋಗಿದ್ದವು. ಅದರಂತೆ ಕೋರ್ಟ್ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಹಿನ್ನಲೆಯಲ್ಲಿ ಸಂಘಟನೆಗಳ ಕಾರ್ಯ ಚಟುವಟಿಕೆ ಮುಂದುವರಿಕೆಗೆ ಆದೇಶ ನೀಡಿತ್ತು.

ಈ ಆದೇಶ ಪ್ರಶ್ನಿಸಿ ಪಾಕಿಸ್ತಾನ ಕೋರ್ಟ್ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಇಂದು ಈ ಪ್ರಕರಣದ ತೀರ್ಪು ನೀಡಿರುವ ಪಾಕಿಸ್ತಾನ ಸುಪ್ರೀಂ ಕೋರ್ಟ್ ಜೆಯುಡಿ ಮತ್ತು ಎಫ್‍ಐಎಫ್ ಸಂಘಟನೆಗಳ ಕಾರ್ಯ ಚಟುವಟಿಕರೆ ಮುಂದುವರಿಕೆಗೆ ಆದೇಶ ನೀಡಿದೆ. ಆ ಮೂಲಕ ಪಾಕಿಸ್ತಾನ ಸರ್ಕಾರಕ್ಕೆ ತೀವ್ರ ಮುಖಭಂಗವಾದಂತಾಗಿದೆ.

Facebook Comments

Sri Raghav

Admin