ಆಟೋದಲ್ಲಿ ಕರೆದೊಯ್ದು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರು ಮಹಿಳೆಯರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

lady-robbers

ಬೆಂಗಳೂರು, ಸೆ.14-ಸಾರ್ವಜನಿಕರನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ಮಾರ್ಗ ಮಧ್ಯೆ ಬೆದರಿಸಿ ಹಣವನ್ನು ವಸೂಲಿ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬನಶಂಕರಿಯ ಆಶಾ (28) ಮತ್ತು ಟಿ.ದಾಸರಹಳ್ಳಿಯ ಸುಧಾ (28) ಬಂಧಿತ ಮಹಿಳೆಯರಾಗಿದ್ದು , ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ರತ್ನ , ಸುಮಾ, ಪದ್ಮ ಮತ್ತು ಆಟೋ ಚಾಲಕ ರಾಜೇಶ್‍ಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.

ಸೆ.11ರಂದು ರಾತ್ರಿ ಮೆಜೆಸ್ಟಿಕ್‍ನಲ್ಲಿ ಸಂತೋಷ್ ಕುಮಾರ್ ಶೆಟ್ಟಿ ಎಂಬುವರನ್ನು ಐದಾರು ಮಂದಿ ಮಹಿಳೆಯರು ಆಟೋದಲ್ಲಿ ಕೂರಿಸಿಕೊಂಡು ಹಣ ಕೊಡದಿದ್ದರೆ ಮಾನ ತೆಗೆಯುವುದಾಗಿ ಬೆದರಿಸಿ ಅವರಿಂದ ಬಲವಂತವಾಗಿ 3,000 ರೂ. ಹಣ ಕಿತ್ತುಕೊಂಡಿದ್ದರು. ಈ ಬಗ್ಗೆ ಸಂತೋಷ್‍ಕುಮಾರ್ ಶೆಟ್ಟಿ ಅವರು ಉಪ್ಪಾರಪೇಟೆ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ತನಿಖೆ ನಡೆಸಿ ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ. ಸಾರ್ವಜನಿಕರನ್ನು ಎದುರಿಸಿ ಹಣವನ್ನು ವಸೂಲಿ ಮಾಡಿ ಮೋಸ ಮಾಡುವ ಮಾಹಿತಿ ಬಗ್ಗೆ ಉಪ್ಪಾರ ಪೇಟೆ ಠಾಣೆ ಪೊಲೀಸರು ಅಥವಾ ಉಪ ಪೊಲೀಸ್ ಆಯುಕ್ತರು ಅಥವಾ ಪಶ್ಚಿಮ ವಿಭಾಗದ ಕಂಟ್ರೋಲ್ ರೂಂ, ದೂರವಾಣಿ:080-22943232ಗೆ ಅಥವಾ 9480801701ಗೆ ಕರೆ ಮಾಡಬಹುದಾಗಿದೆ.

Facebook Comments

Sri Raghav

Admin