ವಿದ್ಯಾರ್ಥಿಗಳಿಗೆ ಗಾಂಜಾ ಮಾರುತ್ತಿದ್ದ ಮೂವರು ವಿದೇಶಿ ಪ್ರಜೆಗಳ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Nigeria--01

ಬೆಂಗಳೂರು, ಸೆ.15- ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ನೈಜೀರಿಯನ್, ಉಗಾಂಡ ಮತ್ತು ದಕ್ಷಿಣ ಸುಡಾನ್ ದೇಶಗಳ ಪ್ರಜೆಗಳು ಸೇರಿದಂತೆ ನಾಲ್ವರನ್ನು ಕೊತ್ತನೂರು ಠಾಣಾ ಪೊಲೀಸರು ಬಂಧಿಸಿ, 5 ಲಕ್ಷ ರೂ. ಮೌಲ್ಯದ ಒಂದು ಕೆ.ಜಿ.ಗಾಂಜಾ, 6 ಮೊಬೈಲ್ ಫೋನ್, 2 ಬೈಕ್, 11 ಸಾವಿರ ರೂ. ನಗದು ವಶಪಡಿಸಿ ಕೊಂಡಿದ್ದಾರೆ.

ಯಲಹಂಕ ನ್ಯೂ ಟೌನ್, 2ನೇ ಕ್ರಾಸ್‍ನಲ್ಲಿ ನೆಲೆಸಿದ್ದ ನೈಜೀರಿಯನ್ ದೇಶದ ಪ್ರಜೆ ಚುಕ್ವುನಾನ್ಸೋ ಅಜ್ಮಮೆಕ್ವೆ (42), ಕಲ್ಯಾಣ ನಗರದ ಬಾಬುಸಾಪಾಳ್ಯದ ಜಿಎನ್‍ರ್ ಗಾರ್ಡನ್‍ನಲ್ಲಿ ನೆಲೆಸಿದ್ದ ಉಗಾಂಡ ದೇಶದ ಲುತಾಯ ಪ್ಯಾಟ್ರಿಕ್ (36), ಕಲ್ಯಾಣ ನಗರದ ಚಳ್ಳಕೆರೆ ಗ್ರಾಮದ ಚಿನ್ನಪ್ಪ ಲೇಔಟ್‍ನಲ್ಲಿ ವಾಸವಿದ್ದ ದಕ್ಷಿಣ ಸುಡಾನ್ ದೇಶದ ಸಬಾಸಿಯೊ ಪೌಲ್ ಗಿಲ್ಲೊ(22) ಹಾಗೂ ಮಾರುತಿ ಸೇವಾ ನಗರ ವೆಂಕಟರಮಣ ಲೇಔಟ್ ಅಂಚೆ ಕಚೇರಿ ರಸ್ತೆ ನಿವಾಸಿ ಕೇರಳ ಮೂಲದ ಡೊನ್ ಕೆ. ಥಾಮಸ್ (24), ಬಂಧಿತ ಆರೋಪಿಗಳು.

Nigeria--02

ಆರೋಪಿಗಳಿಂದ 5 ಲಕ್ಷ ರೂ. ಮೌಲ್ಯದ ಒಂದು ಕೆ.ಜಿ.ಗಾಂಜಾ, 25 ಗ್ರಾಂ ಚರಸ್, 110 ಗ್ರಾಂ ತೂಕದ 254 ಎಂಡಿಎಂಎಸ್ ಪಿಲ್ಸ್ ಮಾತ್ರೆ, 6 ಗ್ರಾಂ ಕೊಕೈನ್, 8 ಎಲ್‍ಎಸ್‍ಡಿ ಪೇಪರ್ ಪೀಸ್, ಎರಡು ವೇಯಿಂಗ್ ಮೆಷಿನ್, ಮಾದಕ ವಸ್ತುಗಳನ್ನು ಸೇದುವ ಹುಕ್ಕಾ ಸಾಮಗ್ರಿ ಮತ್ತು ವಿವಿಧ ಬಗೆಯ ಭಂಗಿಗಳು, 6 ಮೊಬೈಲ್ ಫೋನ್‍ಗಳು, ಒಂದು ಕಪ್ಪು ಬಣ್ಣದ ಪಲ್ಸರ್ ಬೈಕ್, ಒಂದು ಹೀರೋ ಹೊಂಡಾ ಡಿಯೋ ದ್ವಿಚಕ್ರ ವಾಹನ, 11000 ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಕೊತ್ತನೂರು ಠಾಣಾ ವ್ಯಾಪ್ತಿಯ ಕ್ರಿಸ್ತು ಜಯಂತಿ ಕಾಲೇಜು ಹತ್ತಿರ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಕೊತ್ತನೂರು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.  ವಿದೇಶಿ ಆರೋಪಿಗಳ ವಿರುದ್ಧ ಪಾಸ್‍ಪೋರ್ಸ್ ಕಾಯ್ದೆ, ವಿದೇಶಿಯರ ನೋಂದಣಿ ಕಾಯ್ದೆ ಮತ್ತಿತರ ಕಾಯ್ದೆಗಳಡಿ ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಳ್ಳಲಾಗಿದೆ

Facebook Comments

Sri Raghav

Admin